ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಜುಲೈ 25ರಂದು ರಾಷ್ಟ್ರಾಧ್ಯಕ್ಷ ಪದವಿಗೆ ಪಾಟೀಲ್
ಸ್ವತಂತ್ರ ಭಾರತದ ಪ್ರಪ್ರಥಮ ಮಹಿಳಾ ರಾಷ್ಟ್ರಪತಿ ಎಂಬ ಕೀರ್ತಿಗೆ ಪಾತ್ರರಾಗಿರುವ 72 ವರ್ಷದ ಪ್ರತಿಭಾ ಪಾಟೀಲ್ ಅವರು ಜುಲೈ 25 ರಂದು ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ತಮ್ಮ ಹತ್ತಿರದ ಪ್ರತಿಸ್ಪರ್ಧಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಅವರನ್ನು ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸಿದ ಪ್ರತಿಭಾ ಪಾಟೀಲ್ ರಾಷ್ಟ್ರಪತಿ ಚುನಾವಣೆಯಲ್ಲಿ ವಿಜಯ ಸಾಧಿಸಿದ್ದಾರೆ

ಇದು ತಮಗೆ ಸಂದ ಜಯವಲ್ಲ ಪ್ರಜಾಪ್ರಭುತ್ವದ ತತ್ವಗಳಿಗೆ ಭಾರತೀಯರು ನೀಡಿರುವ ಬೆಂಬಲ ಎಂದು ರಾಷ್ಟ್ರಪತಿ ಚುನಾವಣೆಯಲ್ಲಿ ವಿಜಯ ಸಾಧಿಸಿದ ನಂತರ ಪ್ರತಿಭಾ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಅಧಿಕೃತ ಫಲಿತಾಂಶ ಹೊರಬರುತ್ತಿದ್ದಂತೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿಭಾ ಪಾಟೀಲ್ ಅವರ ಮನೆಗೆ ಹೋಗಿ ಶುಭ ಕೋರಿದರು.

ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಯಾಗಿ ಮಹಿಳೆಯೊಬ್ಬರು ಆಯ್ಕೆಯಾಗಿರುವುದು ತಮಗೆ ಸಂತಸ ತಂದಿದೆ ಎಂದು ಸೋನಿಯಾ ಗಾಂಧಿ ಸಂತಸ ವ್ಯಕ್ತಪಡಿಸಿದರು. ಇದಕ್ಕೆ ಕಾರಣರಾದ ಯುಪಿಎ ಅಂಗಪಕ್ಷಗಳಿಗೆ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಪ್ರತಿಭಾ ಅವರ ಗೆಲುವು ಜಾತ್ಯತೀತ ಪ್ರಜಾಪ್ರಭುತ್ವದ ಭದ್ರಬುನಾದಿಗೆ ನಾಂದಿಯಾಗಿದ್ದು, ರಾಜಕೀಯ ಪ್ರೇರಿತ ಒಡಕನ್ನು ತೊಡೆದು ಹಾಕಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ತೃತೀಯ ರಂಗದ ನಿಲುವಿಗೆ ಬಿಜೆಪಿ ವಿರೋಧ
ಹನೀಫ್‌ ಆರೋಪದಿಂದ ಮುಕ್ತಗೊಳ್ಳಲಿ
ಹನಿಫ್ ಭಾರತಕ್ಕೆ ರವಾನೆ ಸಾಧ್ಯತೆ ?
ಉಪಾಧ್ಯಕ್ಷ ಚುನಾವಣೆ ಕಾಂಗೈ ಮನವಿ ಬಿಜೆಪಿ ನಿರಾಕರಣೆ
ಪ್ರತಿಭಾಗೆ ಸಂದ ಎಷ್ಟು ಮತ್ತು ಎಲ್ಲಿಂದ ?
ಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್