ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಒರಿಸ್ಸಾ:30 ಸ್ತ್ರೀಭ್ರೂಣಗಳ ಶವಪತ್ತೆ
ಒರಿಸ್ಸಾ:30 ಸ್ತ್ರೀಭ್ರೂಣಗಳ ಶವ ಪತ್ತೆ
ದೇಶಾದ್ಯಂತ ಲಿಂಗ ಸಮಾನತೆಗಾಗಿ ಆಂದೋಲನಗಳು, ಕಾಯ್ದೆಗಳು ಸಶಕ್ತವಾಗುತ್ತಿರುವಂತೆಯೇ, ಒರಿಸ್ಸಾದಲ್ಲಿ ಮನುಕುಲ ನಾಚುವಂತಹ ಪ್ರಕರಣ ಬೆಳಕಿಗೆ ಬಂದಿದ್ದು, 30 ಹೆಣ್ಣು ಭ್ರೂಣಗಳ ಶವಪತ್ತೆಯಾಗಿದೆ.

ಒರಿಸ್ಸಾದ ನಾಗನಾಥ್ ಎಂಬಲ್ಲಿನ ನಿರ್ಜನ ಪಾಳುಬಾವಿಯಲ್ಲಿ ಪ್ರಸ್ತುತ ನಿರ್ಜೀವ ಭ್ರೂಣಗಳು ಪತ್ತೆಯಾಗಿದ್ದು, ಸದ್ಯ ಜೀರ್ಣಗೊಳ್ಳದೇ ಉಳಿದವುಗಳಷ್ಟೇ ಪತ್ತೆಯಾಗಿವೆ. ಸಂಖ್ಯೆ ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ.

ಪ್ರದೇಶದಲ್ಲಿ ಹೆಣ್ಣು ಶಿಶುಗಳ ಜನನ ತಡೆಯಲ್ಲು ಅಕ್ರಮ ಗರ್ಭಪಾತ ಸಾಮಾನ್ಯವಾಗಿರುವಂತೆಯೇ, ಅಲ್ಲಲ್ಲಿ ಅಪೂರ್ಣ ಬೆಳೆದ ಹೆಣ್ಣು ಶಿಶುಗಳು, ಹೆಣ್ಣು ಭ್ರೂಣಗಳ ಶವ ಪತ್ತೆಯಾಗುತ್ತಿದೆ. ಬಾವಿಯಲ್ಲಿ ನಿರ್ಜೀವ ಭ್ರೂಣಗಳು ಪತ್ತೆಯಾಗಿರುವುದರಿಂದ ವಿಸ್ತೃತ ತನಿಖೆಗೆ ಸರ್ಕಾರ ಆದೇಶಿಸಿದೆ.

ಭ್ರೂಣ ಹೆಣ್ಣಾಗಿ ಬೆಳೆಯಬಹುದು. ಇದು ಕುಟುಂಬಕ್ಕೆ ಹಾನಿ ಎಂಬ ಧೋರಣೆಯೇ ಇವುಗಳನ್ನು ಮೊಳಕೆಯಲ್ಲೇ ಕಿತ್ತೆಸೆಯುವಂತೆ ಮಾಡಿದೆ ಎಂಬುದಾಗಿ ತನಿಖಾ ತಂಡ ಪ್ರಾಥಮಿಕ ಹಂತದಲ್ಲಿ ಅಂದಾಜಿಸಿದೆ.

ನಾಗನಾಥ್‌ನ ಜಿಲ್ಲಾ ಪೊಲೀಸ್ ವರಿಷ್ಠ ರಾಜೇಶ್ ಕುಮಾರ್ ಹೇಳುವಂತೆ, ನಾವು ಜೈವಿಕ ತ್ಯಾಜ್ಯಗಳ ಮಧ್ಯೆ ತಲೆಬುರುಡೆ, ಎಲುಬುಗಳನ್ನು ಗಮನಿಸಿದೆವು. ಅವುಗಳನ್ನು ರಾಸಾಯನಿಕ ಪರೀಕ್ಷೆಗೆ ಗುರಿಪಡಿಸಿದಾಗ ಪ್ರಕರಣ ಬಯಲಾಗಿದೆ ಎಂದಿದ್ದಾರೆ.

ಶಾಲಾ ವಿದ್ಯಾರ್ಥಿಯೋರ್ವ ಅಪೂರ್ಣಾವಸ್ಥೆಯಲ್ಲಿ ಬೆಳೆದ 7 ಹೆಣ್ಣು ಶಿಶುಗಳ ಶವ ಕಂಡಿರುವುದಾಗಿ ಹೇಳಿದ ಬೆನ್ನಲ್ಲೇ ಇತ್ತೀಚೆಗೆ ಸ್ಥೀಯ ಆಸ್ತ್ಪತ್ರೆಗಳಿಗೆ ದಾಳಿ ಮಾಡಿದ್ದರು. ಇದೀಗ ಪಾಳು ಬಾವಿಯಲ್ಲಿ ಬೃಹತ್ ಪ್ರಮಾಣದಲ್ಲಿ ನಿರ್ಜೀವ ಹೆಣ್ಣು ಶಿಶುಗಳು ಪತ್ತೆಯಾಗಿರುವುದನ್ನು ಆಡಳಿತ ಗಂಭೀರವಾಗಿ ಪರಿಗಣಿಸಿದೆ.

ಮಹಿಳಾ ಸಂಘಟನೆಗಳು ಹೋರಾಟ ಆರಂಭಿಸಿವೆ. ಸ್ತ್ರೀರೋಗ ಪತ್ತೆಯ ಅಲ್ಟ್ರಾ ಸೌಂಡ್ ಸ್ಕ್ಯಾನ್ ಯಂತ್ರಗಳನ್ನು ಅಕ್ರಮ ಭ್ರೂಣ ಲಿಂಗ ಪತ್ತೆ ಹಾಗೂ ನಾಶಕ್ಕೆ ಬಳಸುತ್ತಿರುವುದು, ಆಸ್ತ್ಪತ್ರೆಗಳಲ್ಲಿ ಅಕ್ರಮ ಗರ್ಭಪಾತ ವಾಗುತ್ತಿರುವುದಾಗಿ ಮಹಿಳಾ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಡೆಹ್ರಾಡೂನ್‌,ದೆಹಲಿಯಲ್ಲಿ ಭೂಕಂಪ
ಜುಲೈ 25ರಂದು ರಾಷ್ಟ್ರಾಧ್ಯಕ್ಷ ಪದವಿಗೆ ಪಾಟೀಲ್
ತೃತೀಯ ರಂಗದ ನಿಲುವಿಗೆ ಬಿಜೆಪಿ ವಿರೋಧ
ಹನೀಫ್‌ ಆರೋಪದಿಂದ ಮುಕ್ತಗೊಳ್ಳಲಿ
ಹನಿಫ್ ಭಾರತಕ್ಕೆ ರವಾನೆ ಸಾಧ್ಯತೆ ?
ಉಪಾಧ್ಯಕ್ಷ ಚುನಾವಣೆ ಕಾಂಗೈ ಮನವಿ ಬಿಜೆಪಿ ನಿರಾಕರಣೆ