ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಯುಪಿಎಯಿಂದ ಅನ್ಸಾರಿ ನಾಮಪತ್ರ
ದೇಶದ ಎರಡನೇ ಸರ್ವೋಚ್ಛ ಪದವಿಯಾದ ಉಪರಾಷ್ಟ್ರಪತಿ ಪದವಿಗಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದ ಅಭ್ಯರ್ಥಿ ಹಮೀದ್ ಅನ್ಸಾರಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಉಪರಾಷ್ಟ್ರಪತಿಯಾಗಿ ಅಲ್ಪಸಂಖ್ಯಾತ ಮುಸ್ಲೀಂ ವಿಭಾಗದಿಂದ ಪ್ರಾತಿನಿಧ್ಯವಿರಬೇಕೆಂಬ ರಾಜಕೀಯ ಪಕ್ಷಗಳ ಒತ್ತಡದಂತೆ ಎಲ್ಲಾ ಪಕ್ಷಗಳೂ ಮುಸ್ಲೀಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮಾಜಿ ರಾಜ್ಯಸಭಾ ಉಪಾಧ್ಯಕ್ಷೆ ನೆಜ್ಮಾ ಹೆಫ್ತುಲ್ಲಾ ಅವರನ್ನು ಕಣಕ್ಕಿಳಿಸಿದ್ದರೆ, ತೃತೀಯರಂಗ ರಾಷ್ಟ್ರೀಯ ಪ್ರಗತಿಪರ ಐಕ್ಯರಂಗ(ಯುಎನ್‌ಪಿಎ)ಯು ರಶೀದ್ ಮಸೂದ್‌ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ.
ನಾಮಪತ್ರ ಸಲ್ಲಿಸಲು ಇಂದು ಕೊನೆದಿನವಾಗಿರುವಂತೆಯೇ ಉಪರಾಷ್ಟ್ರಪತಿ ಪದಕ್ಕಾಗಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.


ಹಾಲಿ ಅಲ್ಪ ಸಂಖ್ಯಾತರ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿರುವ ಅನ್ಸಾರಿವರು ನಾಮಪತ್ರದ ನಾಲ್ಕು ಕಡತಗಳನ್ನು ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಯಾಗಿರುವ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಯೋಗೇಂದ್ರ ನಾರಾಯಣ್ ಇವರ ಸಮ್ಮುಖ ನಾಮಪತ್ರ ದಾಖಲಿಸಲಾಗಿದೆ.

ನಾಮಪತ್ರ ಸಲ್ಲಿಕೆಯ ವೇಳೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸಿಪಿಐಎಂ ಮುಖ್ಯಸ್ಥ ಸೀತಾರಾಮ್ ಯೆಚೂರಿ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜ, ಪ್ರಮುಖರಾದ ಶರದ್ ಪವಾರ್, ಲಾಲು ಪ್ರಸಾದ್ ಯಾದವ್, ರಾಂ ವಿಲಾಸ್ ಪಾಸ್ವಾನ್, ಟಿ.ಆರ್.ಬಾಲು ಮುಂತಾದವರಿದ್ದರು.
ಮತ್ತಷ್ಟು
ಒರಿಸ್ಸಾ:30 ಸ್ತ್ರೀಭ್ರೂಣಗಳ ಶವಪತ್ತೆ
ಡೆಹ್ರಾಡೂನ್‌,ದೆಹಲಿಯಲ್ಲಿ ಭೂಕಂಪ
ಜುಲೈ 25ರಂದು ರಾಷ್ಟ್ರಾಧ್ಯಕ್ಷ ಪದವಿಗೆ ಪಾಟೀಲ್
ತೃತೀಯ ರಂಗದ ನಿಲುವಿಗೆ ಬಿಜೆಪಿ ವಿರೋಧ
ಹನೀಫ್‌ ಆರೋಪದಿಂದ ಮುಕ್ತಗೊಳ್ಳಲಿ
ಹನಿಫ್ ಭಾರತಕ್ಕೆ ರವಾನೆ ಸಾಧ್ಯತೆ ?