ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕುಖ್ಯಾತ ಡಕಾಯಿತ ಗುಂಪಿನ ದಾಳಿಯಿಂದಾಗಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್)ನ 6 ಸಿಬ್ಬಂದಿ ಸಹಿತ ಎಳು ಸುರಕ್ಷಾ ಭಟರು ಹುತಾತ್ಮರಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ.
ಕುಸುಮಿಯಾ ಗೊಂಡಾರಣ್ಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಕುಖ್ಯಾತ ಡಕಾಯಿತ ತೋಕಿಯಾ ಗುಂಪಿನೊಂದಿಗೆ ಸಂಭವಿಸಿದ ಗುಂಡಿನ ಚಕಮಕಿಯ ವೇಳೆ ಈ ಅನಾಹುತ ಸಂಭವಿಸಿದೆ.
ಹುತಾತ್ಮರಾಗಿರುವ ಎಸ್‌ಟಿಎಫ್ ಸಿಬ್ಬಂದಿಗಳನ್ನು ರಾಜೇಶ್ ಚೌಹಾಣ್, ಉಮಾಶಂಕರ್ ಯಾದವ್,ಗಿರ್ಜಾ ನಾಗರ್,ಲಕ್ಷ್ಣ್ಮಣ್,ಈಶ್ವರ್ ಎಂದು ಗುರುತಿಸಲಾಗಿದ್ದರೆ, ರಾಜ್ಯಪಲೀಸ್ ಸಿಬ್ಬಂದಿಯಾಗಿದ್ದು ಕಾರ್ಯಪಡೆಯ ಮಾಹಿತಿದಾರನಾದ ಮುನ್ನಾ ಎಂದು ಗುರುತಿಸಲಾಗಿದೆ.
ಸುದ್ದಿ ತಿಳಿದ ತಕ್ಷಣ ಲಕ್ನೋದಿಂದ ಡಿಜಿಪಿ ವಿಕ್ರಂ ಸಿಂಗ್ ಸಹಿತ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಸಿಬ್ಬಂದಿಗಳ ಕಳೇಬರವನ್ನು ಬಂಡಾ ಜಿಲ್ಲೆಯ ಕೋತ್ವಾಲಿ ನಗರದಲ್ಲಿ ಇರಿಸಲಾಗಿದೆ.
ರಾಜ್ಯಸರ್ಕಾರಿ ಮೂಲಗಳ ಪ್ರಕಾರ ಹುತಾತ್ಮ ಸಿಬ್ಬಂದಿಗಳ ಅವಲಂಬಿತರಿಗೆ ತಲಾ 5 ಲಕ್ಷ ಗೌರವ ಪರಿಹಾರವಾಗಿ ಘೋಷಿಸಲಾಗಿದೆ. ಪ್ರಸ್ತುತ ಕ್ರಮವು ಡಕಾಯಿತರ ಪ್ರತೀಕಾರದ ಕ್ರಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಸಂಜೆ ತೋಕಿಯಾ ಡಕಾಯಿತರ ಗುಂಪಿನ ಕುಖ್ಯಾತನನ್ನು ಮುಖಾಮುಖಿ(ಎನ್‌ಕಕೌಂಟರ್) ಹೋರಾಟದ ವೇಳೆ ಕಾರ್ಯಪಡೆ ಸಿಬ್ಬಂದಿಗಳು ಸಾಯಿಸಿದ್ದರು. ಆತನ ತಲೆಗೆ 3 ಲಕ್ಷ ಬಹುಮಾನ ಘೋಷಣೆಯಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಡಕಾಯ್ತಿ ಆಕ್ರಮಣವಾಗಿತ್ತೆಂದು ತಿಳಿಸಲಾಗಿದೆ.
|