ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಂಸದರೇ ದೇಶದಅಭಿವೃದ್ಧಿ ಗಮನಿಸಿ -ಕಲಾಂ
ಬದಲಾಗುತ್ತಿರುವ ಕಾಲಮಾನವನ್ನು ಗಮನಿಸಿ ಸಂಸದರು, 2020ನ್ನು ಗುರಿಯಾಗಿರಿಸಿಕೊಂಡು ದೇಶದ ಪ್ರಗತಿಗಾಗಿ ದೂರದೃಷ್ಟಿಯ ಯೋಜನೆ ಹಮ್ಮಿಕೊಳ್ಳಬೇಕು ಎಂಬುದಾಗಿ ಪದನಿರ್ಗಮನ ರಾಷ್ಟ್ರಪತಿ ಡಾ.ಎ ಪಿ ಜೆ ಅಬ್ದುಲ್ ಕಲಾಂ ಸಂಸದರಿಗೆ ಸಲಹೆ ಇತ್ತಿದ್ದಾರೆ.

ಏಲ್ಲಾ ಜಾಗತಿಕ ಪ್ರಜಾತಾಂತ್ರಿಕ ಸಂಸ್ಥೆಗಳಂತೆ ದೇಶದ ಸಂಸತ್ತು ಕೂಡ ಹಲವು ನಿರ್ಣಾಯಕ ಸವಾಲುಗಳನ್ನೆದುರಿಸುತ್ತಿದೆ. ಇದೀಗ 21ನೇ ಶತಮಾನದ ಆರಂಭಹಂತದಲ್ಲಿರುವ ನಾವು ಇನ್ನೊಂದು ದಶಕದ ಮುಂದಿನ ಅಭಿವೃದ್ಧಿಯ ಗುರಿಯತ್ತ ದೇಶವನ್ನು ಸಾಗಿಸಬೇಕಾಗಿದೆ.

ಸಂಸದರು ನೀಡಿದಜ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಾ , ಪ್ರಸ್ತುತ ಚಿಂತನೆಗೆ ಗ್ರಾಸವಾಗುವ ವಿಷಯವನ್ನು ಪ್ರಸ್ತಾಪಿಸಿದರು.

ದೇಶವು ಇದೀಗ ಹೊಸ ಶತಮಾನದ ಶಕ್ತಿಯನ್ನು ಕ್ರೋಢೀಕರಿಸಬೇಕಿದೆ. ತನ್ಮೂಲಕ 2020ರ ಅವಧಿಯನ್ನು ಗಮನದಲ್ಲಿರಿಸಿ 2030ರ ವೇಳೆಗೆ ನಿಜವಾದ ಸ್ವಾತಂತ್ರ್ಯದ ಅರ್ಥವನ್ನು ಅನುಭವಿಸುವಂತಾಗಬೇಕೆಂದು ಕಲಾಂ ತಿಳಿಸಿದರು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಉಪರಾಷ್ಟ್ರಪತಿ ಬೈರೋನ್ ಸಿಂಗ್ ಶೆಖಾವತ್ ಪಾಲ್ಗೊಂಡಿರಲಿಲ್ಲ. ಮುಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲರನ್ನು ಅಭಿನಂದಿಸಿ ಮಾತನಾಡಿದ ಕಲಾಂ ಅವರ ಯೋಜನೆಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಐ. ಕೆ. ಗುಜ್ರಾಲ್ ಮುಂತಾದ ಪ್ರಮುಖರು ಪಾಲ್ಗೊಂಡಿದ್ದರು.
ಮತ್ತಷ್ಟು
ಡಕಾಯಿತರಿಂದ ಎಸ್‌ಟಿಎಫ್ ಸಿಬ್ಬಂದಿಗಳ ಹತ್ಯೆ
ಯುಪಿಎಯಿಂದ ಅನ್ಸಾರಿ ನಾಮಪತ್ರ
ಒರಿಸ್ಸಾ:30 ಸ್ತ್ರೀಭ್ರೂಣಗಳ ಶವಪತ್ತೆ
ಡೆಹ್ರಾಡೂನ್‌,ದೆಹಲಿಯಲ್ಲಿ ಭೂಕಂಪ
ಜುಲೈ 25ರಂದು ರಾಷ್ಟ್ರಾಧ್ಯಕ್ಷ ಪದವಿಗೆ ಪಾಟೀಲ್
ತೃತೀಯ ರಂಗದ ನಿಲುವಿಗೆ ಬಿಜೆಪಿ ವಿರೋಧ