ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಐದುಮಂದಿ ಬಿಜೆಪಿ ಶಾಸಕರ ಅಮಾನತು
ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಪರ ಅಡ್ಡಮತದಾನ ಮಾಡಿದ ಐದು ಮಂದಿ ಗುಜರಾತ್‌ ರಾಜ್ಯದ ಶಾಸಕರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಅಮಾನತಿನಲ್ಲಿರಿಸಿದೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿಯವರ ಪ್ರಮುಖ ಟೀಕಾಕಾರರೂ ಆಗಿರುವ ಈ 5 ಮಂದಿ ಶಾಸಕರು, ಇತ್ತೀಚಿನ ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷಬೆಂಬಲಿತ ಅಭ್ಯರ್ಥಿಯ ಪರ ಮತ ಚಲಾಯಿಸದೆ, 'ವಿಪ್'(ಸಂಘಟನಾಆದೇಶ)ಉಲ್ಲಂಘಿಸಿರುವುದಾಗಿ ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್‌ಸಿಂಗ್ ಅವರು ಇಂದು ಹೊರಡಿಸಿರುವ ಆದೇಶದಂತೆ ಅಮಾನತಿಗೊಳಗಾದ ಶಾಸಕರ ಯಾದಿಯಲ್ಲಿ ಮೋದಿ ವಿರೋಧಿ ಶಾಸಕ ಧೀರೂಬಾಯ್ ಗಜೇರ ಅವರೂ ಇರುವುದು ವಿಶೇಷ.

ಪ್ರಸ್ತುತ ಶಾಸಕರು ಬಿಜೆಪಿಯ ಶಿಸ್ತು ಉಲ್ಲಂಘಿಸಿರುವುದಕ್ಕಾಗಿ ಈ ಅಮಾನತು ಕ್ರಮ ಎಂದು ಅಧ್ಯಕ್ಷರ ಪ್ರಕಟಣೆ ತಿಳಿಸಿದೆ. ತನ್ಮಧ್ಯೆ ಸಂಭಾವ್ಯ ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗುಜರಾತ್ ಬಿಜೆಪಿಯನ್ನು ಬಲ ಪಡಿಸಲು ಅರುಣ್‌ ಜೇಟ್ಲಿಯವರಿಗೆ ಉಸ್ತುವಾರಿ ನೀಡಲಾಗಿದೆ.
ಮತ್ತಷ್ಟು
ಸಂಸದರೇ ದೇಶದಅಭಿವೃದ್ಧಿ ಗಮನಿಸಿ -ಕಲಾಂ
ಡಕಾಯಿತರಿಂದ ಎಸ್‌ಟಿಎಫ್ ಸಿಬ್ಬಂದಿಗಳ ಹತ್ಯೆ
ಯುಪಿಎಯಿಂದ ಅನ್ಸಾರಿ ನಾಮಪತ್ರ
ಒರಿಸ್ಸಾ:30 ಸ್ತ್ರೀಭ್ರೂಣಗಳ ಶವಪತ್ತೆ
ಡೆಹ್ರಾಡೂನ್‌,ದೆಹಲಿಯಲ್ಲಿ ಭೂಕಂಪ
ಜುಲೈ 25ರಂದು ರಾಷ್ಟ್ರಾಧ್ಯಕ್ಷ ಪದವಿಗೆ ಪಾಟೀಲ್