ಎರಡು ಸಿಖ್ ಬಣಗಳ ನಡುವಿನ ಘರ್ಷಣೆ ಸಿರ್ಸದಲ್ಲಿ ತ್ವೇಷಮಯ ವಾತಾವರಣಕ್ಕೆ ಕಾರಣವಾಗಿದ್ದು, ಪ್ರಕರಣದಲ್ಲಿ 5 ಮಂದಿ ಗಾಯಗೊಂಡಿದ್ದಾರೆ.
ಡೇರಾ ಹಾಗೂ ಸಿಖ್ ಬಣಗಳ ನಡುವಿನ ಘರ್ಷಣೆಯಲ್ಲಿ ಹರ್ಯಾಣಾ ಪೊಲೀಸ್ ಸಿಬ್ಬಂದಿ, ಕ್ಷಿಪ್ರ ಕಾರ್ಯಪಡೆ (ಆರ್‌ಪಿಎಫ್)ಯ ಇಬ್ಬರು ಸಿಬ್ಬಂದಿಗಳೂ ಗಾಯಗೊಂಡಿರುವುದಾಗಿ ಮಾಹಿತಿ ಲಭಿಸಿದೆ.
ಸಿರ್ಸದಲ್ಲಿನ ಉದ್ವಿಗ್ನತೆ ಹಾಗೂ ಯಾದವೀ ಕಲಹವನ್ನು ನಿಯಂತ್ರಿಸಲು ಅರೆ ಸೇನಾಪಡೆಗೆ ವಿನಂತಿಸಲಾಗಿದೆ. ಅವರೀಗ ಪ್ರದೇಶವನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ.
ಅಶಾಂತಿಗೆ ಕಾರಣವಾಗಿರುವ ಡೇರಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ತನ್ಮಧ್ಯೆ ಇನ್ನಷ್ಟು ದುರ್ಘಟನೆಗಳಾಗದಂತೆ ಕ್ರಮಕೈಗೊಳ್ಳಲಾಗಿದೆ ಎಂಬುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ.
|