ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪದನ್ವಯ ಬಂಧನದಲ್ಲಿದ್ದ ಬಾಲಿವುಡ್‌ತಾರೆ ಕುಖ್ಯಾತ ಅಬುಸಲೇಮ್‌ನ ಗೆಳತಿ ಮೋನಿಕಾ ಬೇಡಿಗೆ ಇಂದು ಜಾಮೀನು ಬಿಡುಗಡೆ ಲಭಿಸಿದೆ.
ಆಕೆಯನ್ನು ಇಲ್ಲಿನ ಚೆಂಚಲಗುಡ್ಡ ಜೈಲಿನಲ್ಲಿರಿಸಲಾಗಿತ್ತು, ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ಬಿಡುಗಡೆ ನೀಡಿರುವ ಹಿನ್ನೆಲೆಯಲ್ಲಿ ಒಂದು ದಿನದ ಬಳಿಕ ಇಂದು ಬೆಳಗ್ಗೆ 7.45ಗಂಟೆಗೆ ಆಕೆಗೆ ಜೈಲಿನಿಂದ ಹೊರತೆರಳಲು ಅನುಮತಿಸಲಾಗಿದೆ.
ನಕಲಿ ಪಾಸ್‌ಪೋರ್ಟ್ ಪ್ರಕರಣಕ್ಕೆ ಕುರಿತಂತೆ ಮೋನಿಕಾ ಬೇಡಿ 2005 ನವೆಂಬರ್ ತಿಂಗಳಿಂದ ಜೈಲಲ್ಲಿ ಕಳೆಯುತ್ತಿದ್ದಾಳೆ. ಜಾಮೀನು ಬಿಡುಗಡೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋನಿಕಾ ನನಗೆ ಕೊನೆಗೂ ನ್ಯಾಯ ಲಭಿಸಿದೆ, ದೇವರಿಗೆ ಕೃತಜ್ಞತೆಗಳು ಎಂದಿದ್ದಾಳೆ.
ಸದ್ಯ ಪಂಜಾಬಿನ ಹೋಶಿಯಾಪುರ್‌ನಲ್ಲಿರುವ ಕುಟುಂಬದೊಂದಿಗೆ ಸೇರಿ ಕೆಲಕಾಲ ಕಳೆಯಬೇಕೆಂದಿರುವೆ ಎಂದಿರುವ ಮೋನಿಕಾ, ಭವಿಷ್ಯದ ಚಟುವಟಿಕೆಯ ಕುರಿತ ಬಳಿಕ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
|