ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಇಂಡೊ-ಅಮೆರಿಕ ಅಣು ಒಪ್ಪಂದಕ್ಕೆ ಸಮಿತಿ ಒಪ್ಪಿಗೆ
ರಾಜಕೀಯ ವ್ಯವಹಾರಗಳ ಸಂಸದೀಯ ಸಮಿತಿ ಮತ್ತು ರಕ್ಷಣಾ ವ್ಯವಹಾರಗಳ ಸಂಸದಿಯ ಸಮಿತಿಯು,ಕಳೆದ ವಾರ ವಾಷಿಂಗ್ಟನ್‌ನಲ್ಲಿ ಮಾತುಕತೆಯ ಮೂಲಕ ಉಭಯ ದೇಶಗಳ ನಡುವಿನ ಅಣು ಒಪ್ಪಂದದ ಕರಡು ಪ್ರತಿಗೆ ತಮ್ಮ ಸಮ್ಮತಿಗಳನ್ನು ಸೂಚಿಸಿವೆ.

ತನ್ನ ಫಾಸ್ಟ್ ಬ್ರೀಡರ್ ರಿಯಾಕ್ಟರ್‌ಗಳಿಗಾಗಿ ಯುರೇನಿಯಂನ್ನು ಪುನರ್ಬಳಕೆಗೆ ಒಪ್ಪಂದದಲ್ಲಿ ಅವಕಾಶ ಇರಬೇಕು ಎಂದು ಭಾರತ ವಾದಿಸಿತ್ತು. ಭಾರತದ ಈ ವಾದಕ್ಕೆ ಅಮೆರಿಕ ಸೂಕ್ತವಾಗಿ ಪ್ರತಿಕ್ರಿಯಿಸಿ, ಥೊರಿಯಂನೊಂದಿಗೆ ಯುರೇನಿಯಂ ಬಳಕೆಗೆ ಸಮ್ಮತಿಸಿದೆ.

ಪ್ರಧಾನಿ ಮನ್‌ಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಸಂಸದಿಯ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ,ರಕ್ಷಣಾ ಸಚಿವ ಎ ಕೆ ಅಂತೋನಿ, ಗೃಹ ಸಚಿವ ಶಿವರಾಜ್ ಪಾಟೀಲ್ ಉಪಸ್ಥಿತರಿದ್ದು, ಒಪ್ಪಂದ ಜಾರಿಯಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಯ ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇಂದ್ರ ವಿದೇಶಾಂಗ ಸಚಿವ ಮುಖರ್ಜಿ, ಭಾರತ ವ್ಯಕ್ತಪಡಿಸಿರುವ ಎಲ್ಲ ಕಳವಳಗಳಿಗೆ ಅಣು ಒಪ್ಪಂದದಲ್ಲಿ ಅಮೆರಿಕ ಸೂಕ್ತವಾಗಿ ಸ್ಪಂದಿಸಿದೆ.

123 ನಾಗರಿಕ ಅಣು ಒಪ್ಪಂದ ಎಂದು ಕರೆಯಲಾಗಿರುವ ಒಪ್ಪಂದಕ್ಕೆ ಸಂಬಂಧ ಪಟ್ಟಂತೆ ಉಭಯ ದೇಶಗಳ ನಡುವೆ ಕಠಿಣ ಎನ್ನುವ ರೀತಿಯಲ್ಲಿ ಹಲವಾರು ಸುತ್ತಿನ ಮಾತುಕತೆಗಳು ಜರುಗಿದ್ದವು.

ಕಳೆದ ವಾರ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಎಂ ಕೆ ನಾರಾಯಣನ್ ನೆತೃತ್ವದಲ್ಲಿ ಭಾರತೀಯ ನಿಯೋಗವು ವಾಷಿಂಗ್ಟನ್‌ಗೆ ಭೇಟಿ ನೀಡಿ ಮಾತುಕತೆ ನಡೆಸಿತ್ತು. ನಿಯೋಗದಲ್ಲಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಕೂಡ ಇದ್ದರು.
ಮತ್ತಷ್ಟು
ಮೊನಿಕಾ ಬೇಡಿಗೆ ಜಾಮೀನು
ಮುಂಬೈಸ್ಫೋಟ:ಹತ್ತಕ್ಕೇರಿದ ಮರಣದಂಡನೆ
ಸಿಖ್-ಡೇರಾ ಘರ್ಷಣೆ:6ಗಾಯ
ಐದುಮಂದಿ ಬಿಜೆಪಿ ಶಾಸಕರ ಅಮಾನತು
ಸಂಸದರೇ ದೇಶದಅಭಿವೃದ್ಧಿ ಗಮನಿಸಿ -ಕಲಾಂ
ಡಕಾಯಿತರಿಂದ ಎಸ್‌ಟಿಎಫ್ ಸಿಬ್ಬಂದಿಗಳ ಹತ್ಯೆ