ಮುಂಬೈ ಸರಣಿ ಬಾಂಬ್ ಸ್ಫೋಟದ ವೇಳೆ ಶಿವಸೇನಾ ಭವನ್ ಹಾಗೂ ಏರ್‌ಇಂಡಿಯಾ ವಿಮಾನ ನಿಲ್ದಾಣ ಸ್ಫೋಟ ಸಂಚಿನ ಪ್ರಮುಖ ಆರೋಪಿಗೆ ಇಂದು ವಿಶೇಷ ಟಾಡಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಮರಣದಂಡನೆಗೀಡಾದ ಆರೋಪಿಯನ್ನು ಫಾರೂಖ್ ಪಾವ್ಲೆ ಎಂದು ಗುರುತಿಸಲಾಗಿದೆ. ಈತ ಸರಣಿ ಬಾಂಬ್ ಪ್ರಕರಣದ ಆರೋಪಿಗಳಲ್ಲಿ ಮರಣದಂಡನೆಗೀಡಾದ 11ನೇ ವ್ಯಕ್ತಿಯಾಗಿದ್ದಾನೆ.
ಈತ ಸ್ಫೋಟ ಸಂಚು, ಕೃತ್ಯಕ್ಕಾಗಿ ಯೋಜನೆ ಹಾಗೂ ಹಣಪಡೆದುದು ಮತ್ತು ಕೊಲೆಕೃತ್ಯಗಳ ಆರೋಪ ಹೊಂದಿದ್ದನು. ಕೃತ್ಯದ ದಿನದದಂದು ರಿಮೋಟ್ ಟೈಮರ್ ಅಳವಡಸಿ ಸ್ಫೋಟಕ ತುಂಬಿದ ವಾಹನವನ್ನು ಶಿವಾಸೇನಾ ಕೇಂದ್ರ ಕಚೇರಿಯ ಲಕ್ಕಿ ಪೆಟ್ರೋಲ್ ಬಂಕ್ ಬಳಿ ಇರಿಸಿದ್ದನು.
ಕೃತ್ಯದಲ್ಲಿ 4 ಮಂದಿ ಮೃತಪಟ್ಟು 38 ಮಂದಿ ಗಾಯಗೊಂಡಿದ್ದರು. 1993ರಲ್ಲಿ ಮುಂಬೈಯಲ್ಲಿ ಸಂಭವಿಸಿದ 12 ಭಯಂಕರ ಆಸ್ಫೋಟಗಳಲ್ಲಿ ಒಟ್ಟು 257 ಮಂದಿ ಸಾವನ್ನಪ್ಪಿ 700 ಮಂದಿ ಗಾಯಗೊಂಡಿದ್ದರು.
|