ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಗೋವಾ: ಪತನದಂಚಿನಲ್ಲಿ ದಿಗಂಬರ್ ಸರ್ಕಾರ
ರಾಜ್ಯದಲ್ಲಿ ಕಾಂಗ್ರೆಸ್‌ ಮೈತ್ರಿಕೂಟದ ಅಲ್ಪಬಹುಮತದ ಸರ್ಕಾರದಿಂದ 4ಮಂದಿ ಶಾಸಕರು ಇಂದು ರಾಜೀನಾಮೆ ನೀಡುವುದರೊಂದಿಗೆ ಮುಖ್ಯಮಂತ್ರಿ ದಿಗಂಬರ್‌ ಕಾಮತ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನದಂಚು ತಲುಪಿದೆ.

ಮಹತ್ವದ ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗಿರುವ ಪ್ರಸ್ತುತ ಪುಟ್ಟ ರಾಜ್ಯದಲ್ಲಿ ಅಧಿಕಾರಸ್ಥ ಒಕ್ಕೂಟದ ಶಾಸಕರ ರಾಜೀನಾಮೆಯೊಂದಿಗೆ ಎರಡು ತಿಂಗಳು ಪ್ರಾಯದ ಕಾಂಗ್ರೆಸ್‌ ಮೈತ್ರಿಕೂಟದ ನವಜಾತ ಸರ್ಕಾರ ರಾಜಕೀಯ ಅಸ್ಥಿರತೆಗೆ ಸಿಲುಕಿದೆ.

ರಾಜೀನಾಮೆ ನೀಡಿದ ಶಾಸಕರೆಲ್ಲಿ ಒಬ್ಬರು ಕಾಂಗ್ರೆಸ್, ಇಬ್ಬರು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಹಾಗೂ ಓರ್ವ ಪಕ್ಷೇತರ ಎಂದು ತಿಳಿದುಬಂದಿದೆ. ಇದರೊಂದಿಗೆ 40 ಸದಸ್ಯರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ದಿಗಂಬರ ಕಾಮತ್ ಸರ್ಕಾರ ಬಹುಮತ ಕಳೆದುಕೊಂಡಿದೆ.

ಕಾಂಗ್ರೆಸ್ ಪಕ್ಷದ ಮಹಿಳಾ ಶಾಸಕಿ ವಿಕ್ಟೋರಿಯಾ ಫೆರ್ನಾಂಡಸ್, ಪಕ್ಷೇತರ ಅಭ್ಯರ್ಥಿ ಸಲಗಾಂವಕರ್ ಹಾಗೂ ಎಂಜಿಪಿಯ ಶಾಸಕರಿಬ್ಬರು ರಾಜೀನಾಮೆ ನೀಡಿದವರಾಗಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್-ಎನ್‌ಸಿಪಿ ಪ್ರಾಬಲ್ಯದ ಮೈತ್ರಿಕೂಟ ಕೂದಲೆಳೆ ಅಂತರದ ಬಹುಮತದಲ್ಲಿ ಸರ್ಕಾರ ರಚಿಸಿತ್ತು. ಕಾಂಗ್ರೆಸ್‌ಗೆ 16 ಶಾಸಕ ಬಲವಿದ್ದರೆ, ಎನ್‌ಸಿಪಿ 3 ಸದಸ್ಯಬಲ ಹೊಂದಿದೆ. ಇತರಂತೆ ಎಜಿಪಿ 2 ಹಾಗೂ ಓರ್ವ ಪಕ್ಷೇತರ ಶಾಸಕನ ಬೆಂಬಲದೊಂದಿಗೆ 23 ಮಂದಿ ಶಾಸಕರ ಬೆಂಬಲದೊಂದಿಗೆ ದಿಗಂಬರ ಕಾಮತ್ ಅಧಿಕಾರಕ್ಕೇರಿತು.

ಆದರೆ ಪ್ರತಿಪಕ್ಷವಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ)ಗೆ 14 ಮಂದಿ ಶಾಸಕರ ಪ್ರಾಬಲ್ಯವಿದೆ. ಇದೀಗ ಸರ್ಕಾರದಿಂದ ಹೊರಬಂದಿರುವ 5 ಮಂದಿಯ ನಿಲುವು ಏನು ಎಂಬುದನ್ನಾಧರಿಸಿ ಗೋವಾ ರಾಜಕೀಯ ಹಾಗೂ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.
ಮತ್ತಷ್ಟು
ಸ್ಫೋಟ ಆರೋಪಿಗೆ ಮರಣದಂಡನೆ
ಮಹಿಳಾ ಪ್ರಥಮಪ್ರಜೆ ಪ್ರತಿಭಾ ಪ್ರತಿಜ್ಞಾವಿಧಿ
ಇಂಡೊ-ಅಮೆರಿಕ ಅಣು ಒಪ್ಪಂದಕ್ಕೆ ಸಮಿತಿ ಒಪ್ಪಿಗೆ
ಮೊನಿಕಾ ಬೇಡಿಗೆ ಜಾಮೀನು
ಮುಂಬೈಸ್ಫೋಟ:ಹತ್ತಕ್ಕೇರಿದ ಮರಣದಂಡನೆ
ಸಿಖ್-ಡೇರಾ ಘರ್ಷಣೆ:6ಗಾಯ