ಉನ್ನತ ಶಿಕ್ಷಣಕ್ಕಾಗಿ ವಿದ್ಯಾಸಂಸ್ಥೆಗಳಲ್ಲಿ ಇತರ ಹಿಂದುಳಿದ ಜಾತಿ(ಒಬಿಸಿ) ಅಭ್ಯರ್ಥಿಗಳಿಗೆ 27ಶೇಕಡ ಮೀಸಲಾತಿ ನೀಡಬೇಕೆಂಬ ಬೇಡಿಕೆ ಕುರಿತ ವಿವಾದದಲ್ಲಿ ಸುಪ್ರೀಂಕೋರ್ಟ್ ಆಗಸ್ಟ್ 7ರಂದು ವಿಚಾರಣೆ ನಡೆಸಲಿದೆ.
ಒಬಿಸಿ ವಿಭಾಗಗಳ ಅಭ್ಯರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ 27 ಶೇಕಡ ಮೀಸಲಾತಿ ನೀಡುವ ಕುರಿತು ಸಾಂವಿಧಾನಿಕ ಸಿಂಧುತ್ವ ವನ್ನು ಪ್ರಶ್ನಿಸಿ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ವ್ಯಾಜ್ಯ ದಾಖಲಿಸಲಾಗಿತ್ತು.
ಈ ಕುರಿತು ಇಂದಿನ ವಿಚಾರಣೆಯಲ್ಲಿ ನ್ಯಾಯಾಲವು ಪ್ರಕರಣವನ್ನು ಆಗಸ್ಟ್7ರಂದು ಮತ್ತೆ ವಿಚಾರಣೆಗೆ ಸ್ವೀಕರಿಸುವುದಾಗಿ ಆದೇಶಿಸಿದೆ.
ಸರ್ವೋಚ್ಛ ನ್ಯಾಯಾಲಯದ ಪ್ರಧಾನ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಇವರ ನೇತೃತ್ವದ ವಿಭಾಗೀಯ ಪೀಠವು ನೀಡಿದ ಆದೇಶದಂತೆ , ಈ ಅವಧಿಯಲ್ಲಿ ಪಂಚಸದಸ್ಯ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಪ್ರಕರಣದ ಕುರಿತು ವಿಷಯ ಮನನ ಮಾಡಿದ ಬಳಿಕ ಮುಂದಿನ ವಾದವನ್ನು ಆಲಿಸಲಾಗುವುದು ಎಂದಿದ್ದಾರೆ.
ತನ್ಮಧ್ಯೆ, ಮಾರ್ಚ್ 29ರಂದು ನೀಡಿದ ಮಧ್ಯಂತರ ಆದೇಶದಂತೆ ವಿವಾದಗ್ರಸ್ತ ಮಸೂದೆ ಜಾರಿ ಕುರಿತ ನ್ಯಾಯಾಲಯದ ತಡೆಯಾಜ್ಞೆಯನ್ನು ತೆರವು ಗೊಳಿಸಬೇಕೆಂದು ಕೇಂದ್ರ ಸರ್ಕಾರ ಜುಲೈ 31ರಂದು ಮನವಿ ಸಲ್ಲಿಸಲಿದೆ.ಆ.7: ಒಬಿಸಿ ಮೀಸಲಾತಿ ವಿಚಾರಣೆ ನವದೆಹಲಿ ಉನ್ನತ ಶಿಕ್ಷಣಕ್ಕಾಗಿ ವಿದ್ಯಾಸಂಸ್ಥೆಗಳಲ್ಲಿ ಇತರ ಹಿಂದುಳಿದ ಜಾತಿ(ಒಬಿಸಿ) ಅಭ್ಯರ್ಥಿಗಳಿಗೆ 27ಶೇಕಡ ಮೀಸಲಾತಿ ನೀಡಬೇಕೆಂಬ ಬೇಡಿಕೆ ಕುರಿತ ವಿವಾದದಲ್ಲಿ ಸುಪ್ರೀಂಕೋರ್ಟ್ ಆಗಸ್ಟ್ 7ರಂದು ವಿಚಾರಣೆ ನಡೆಸಲಿದೆ.
ಒಬಿಸಿ ವಿಭಾಗಗಳ ಅಭ್ಯರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ 27 ಶೇಕಡ ಮೀಸಲಾತಿ ನೀಡುವ ಕುರಿತು ಸಾಂವಿಧಾನಿಕ ಸಿಂಧುತ್ವ ವನ್ನು ಪ್ರಶ್ನಿಸಿ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ವ್ಯಾಜ್ಯ ದಾಖಲಿಸಲಾಗಿತ್ತು.
ಈ ಕುರಿತು ಇಂದಿನ ವಿಚಾರಣೆಯಲ್ಲಿ ನ್ಯಾಯಾಲವು ಪ್ರಕರಣವನ್ನು ಆಗಸ್ಟ್7ರಂದು ಮತ್ತೆ ವಿಚಾರಣೆಗೆ ಸ್ವೀಕರಿಸುವುದಾಗಿ ಆದೇಶಿಸಿದೆ.
ಸರ್ವೋಚ್ಛ ನ್ಯಾಯಾಲಯದ ಪ್ರಧಾನ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಇವರ ನೇತೃತ್ವದ ವಿಭಾಗೀಯ ಪೀಠವು ನೀಡಿದ ಆದೇಶದಂತೆ , ಈ ಅವಧಿಯಲ್ಲಿ ಪಂಚಸದಸ್ಯ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಪ್ರಕರಣದ ಕುರಿತು ವಿಷಯ ಮನನ ಮಾಡಿದ ಬಳಿಕ ಮುಂದಿನ ವಾದವನ್ನು ಆಲಿಸಲಾಗುವುದು ಎಂದಿದ್ದಾರೆ.
ತನ್ಮಧ್ಯೆ, ಮಾರ್ಚ್ 29ರಂದು ನೀಡಿದ ಮಧ್ಯಂತರ ಆದೇಶದಂತೆ ವಿವಾದಗ್ರಸ್ತ ಮಸೂದೆ ಜಾರಿ ಕುರಿತ ನ್ಯಾಯಾಲಯದ ತಡೆಯಾಜ್ಞೆಯನ್ನು ತೆರವು ಗೊಳಿಸಬೇಕೆಂದು ಕೇಂದ್ರ ಸರ್ಕಾರ ಜುಲೈ 31ರಂದು ಮನವಿ ಸಲ್ಲಿಸಲಿದೆ.
|