ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಶಿಬಿರದ ಮೇಲೆ ಉಲ್ಫಾ ಉಗ್ರರು ನಡೆಸಿದ ದಾಳಿಯನ್ನು ಯಶಸ್ವಿಯಾಗಿ ವಿಫಲಗೊಳಿಸಿದ ಯೋಧರು, ಇಬ್ಬರು ಆತ್ಮಹತ್ಯಾ ಉಗ್ರರನ್ನು ಸಾಯಿಸಿದ್ದಾರೆ.
ಸಿಆರ್‌ಪಿಎಫ್ ಶಿಬಿರ ಆಕ್ರಮಣದ ವೇಳೆ ಸಂಭವಿಸಿದ ಸಶಸ್ತ್ರ ಘರ್ಷಣೆಯಲ್ಲಿ ಸಾವನ್ನಪ್ಪಿದ ಉಗ್ರರು ಉಲ್ಫಾ ಆತ್ಮಾಹುತಿ ತಂಡದ ಸದಸ್ಯರಿರಬಹುದೆಂದು ಸಂಶಯಿಸಲಾಗಿದೆ.
ಝಾಕುರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸಂಭವಿಸಿದ ಪ್ರಕರಣದಲ್ಲಿ ಏಳು ಮಂದಿ ಜವಾನರೂ ತೀವ್ರಗಾಯಗೊಂಡಿದ್ದಾರೆ. ಉಗ್ರರು ಗ್ರೇನೇಡುಗಳು, ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿರುವರೆಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿವೆ.
ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿರುವುದನ್ನು ಸಿಆರ್‌ಪಿ ಪಡೆಯ ಮಹಾ ನಿರೀಕ್ಷಕ ಎಸ್. ಕೆ. ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
|