ಎಂಟು ವರ್ಷಗಳ ಹಿಂದೆ ಕಾರ್ಗಿಲ್, ದ್ರಾಸ್ ಪ್ರದೇಶಗಳಲ್ಲಿ ಭಾರತವನ್ನು ಆಕ್ರಮಿಸಿದ ಪಾಕಿಸ್ಥಾನಿ ಸೇನೆಯನ್ನು ಹಿಮ್ಮೆಟಿಸಿದ ಗೆಲುವು ಸಾಧಿಸಿದ'ಆಪರೇಷನ್ ವಿಜಯ್' ಸ್ಮರಣೆಯನ್ನು ಭಾರತೀಯ ಸೈನಿಕರು ವರ್ಣರಂಜಿತ ಕಾರ್ಯಕ್ರಮಗಳೊಂದಿಗೆ ಆಚರಿಸಿದರು.
ಜಮ್ಮು ಕಾಶ್ಮೀರ ಪ್ರದೇಶದ ದ್ರಾಸ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳೂ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ಸೇನೆಯ ವತಿಯಿಂದ ವಿವಿಧ ದೇಶಪ್ರೇಮವನ್ನು ತಿಳಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರೆ, ಸ್ಥಳೀಯ ಕಲಾವಿದರು ನಿವಾಸಿಗಳೂ ತಮ್ಮ ಸಂಭ್ರವನ್ನು ವಿವಿಧ ಕುಣಿತಗಳ ಮೂಲಕ ಪ್ರದರ್ಶಿಸಿದರು.
1999ರ ಜುಲೈ 25ರಂದು ಕಾರ್ಗಿಲ್‌ನ ದುರ್ಗಮ ಬೆಟ್ಟ ಪ್ರದೇಶದಲ್ಲಿ ಭಾರತೀಯ ಯೋಧರು ಶತ್ರುಗಳ ವಿರುದ್ಧ ಕಾರ್ಯಾಚರಣೆಯಲ್ಲಿ ಗೆಲುವಿನ ಪತಾಕೆ ಅರಳಿಸಿದ್ದರು.
|