ಉನ್ನತ ಹುದ್ದೆಗೆ ಪ್ರಧಾನಮಂತ್ರಿಗಳು ಹಿರಿತನವನ್ನು ಕಡೆಗೆಣಿಸಿ ತಮಗಿಂತಲೂ ಕಿರಿಯ ಅಧಿಕಾರಿಗಳನ್ನು ಪೊಲೀಸ್ ಆಯುಕ್ತ ಹುದ್ದೆಗೆ ನೇಮಕ ಮಾಡಿದ್ದಾರೆ ಎಂದು ಬೇಡಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಪೋಲಿಸ್ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ವೈ.ಎಸ್.ದದ್ವಾಲ್ ಅವರ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದ್ದು, ಈ ಅನ್ಯಾಯದ ವಿರುದ್ಧ ತಾವು ಹೋರಾಡುವುದಾಗಿ ದೇಶದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಕಿರಣ ಬೇಡಿ ಘೋಷಿಸಿದ್ದಾರೆ.
ಇದು ತಮಗೆ ಸಂಪೂರ್ಣ ಅನ್ಯಾಯವಾಗಿದೆ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ತಮ್ಮನ್ನು ಕಡೆಗಣಿಸಿದ್ದಾರೆ. ಸರಕಾರ ಹಾಗೂ ನೌಕರಶಾಹಿ ವಿರುದ್ಧ ತಾವು ಸಂಪೂರ್ಣವಾಗಿ ನಿರಾಸೆಯಾಗಿರುವುದಾಗಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ತಮಗಿಂತಲೂ ಕಿರಿಯ ಅಧಿಕಾರಿಯನ್ನು ಈ ಉನ್ನತ ಹುದ್ದೆಗೆ ನೇಮಕ ಮಾಡಿರುವ ಆಯ್ಕೆ ಕ್ರಮ ತಮಗೆ ಬಗೆದಿರುವ ಅನ್ಯಾಯ. ಸಂಪುಟದಲ್ಲಿ ಕೊನೆಯ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯ ಶ್ರೇಣಿಯನ್ನು ಪ್ರಧಾನಿಗಳು ಹೇಗೆ ಅಲಕ್ಷಿಸಿದರು? ಎಂದು ಪ್ರಶ್ನಿಸಿದ ಬೇಡಿ ತಮ್ಮ ನಿರಾಶೆಯನ್ನು ಸುದ್ದಿಗಾರರ ಮುಂದೆ ಹೊರಗೆಡವಿದರು.
ಪ್ರಧಾನಿಗಳು ಹಿರಿತನದ ಆಧಾರದ ಮೇಲಿಂದ ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ಇಟ್ಟಿಕೊಂಡಿದ್ದೆ. ಆದರೆ, ಅವರು ತಮಗೆ ಅಷ್ಟೇ ಅಲ್ಲ, ಇಡೀ ಪೋಲಿಸ್ ವ್ಯವಸ್ಥೆಯನ್ನು ಕಡೆಗಣಿಸಿದ್ದಾರೆ.
ಈ ಉನ್ನತ ಹುದ್ದೆಗೆ ತಮ್ಮ ಹೆಸರನ್ನು ಸೂಚಿಸಿದ ದೆಹಲಿ ರಾಜ್ಯಪಾಲರನ್ನು ಉದಾಸೀನ ಮಾಡಿದ್ದಾರೆ. ಅಲ್ಲದೆ, ಈ ಹುದ್ದೆಯಲ್ಲಿ ತಮ್ಮನ್ನು ಕಾಣಬಯಸಿದ್ದ ಜನತೆಯನ್ನು ಪ್ರಧಾನಿಗಳು ಉದಾಸೀನರನ್ನಾಗಿ ಮಾಡಿದ್ದಾರೆ ಎಂದು ಅವರು ಮನದ ನೋವನ್ನು ತೋಡಿಕೊಂಡರು.
ಆದರೆ, ಈ ಅನ್ಯಾಯವನ್ನು ನಾನು ಸುಮ್ಮನೆ ಬಿಡುವುದಿಲ್ಲ. ತಾರತಮ್ಯ ನೀತಿಯ ವಿರುದ್ಧ ಅಂತಿಮ ಹೋರಾಟ ಮಾಡುತ್ತೇನೆ ಎಂದು ಬೇಡಿ ಹೇಳಿದ್ದಾರೆ.
|