ಶಾಸಕರ ರಾಜೀನಾಮೆಯಿಂದ ಮುಖ್ಯಮಂತ್ರಿ ದಿಗಂಬರ್ ಕಾಮತ್ ಸರ್ಕಾರದ ಅತಂತ್ರತೆ ಮುಂದುವರಿದಿರುವಂತೆಯೇ, ಗೋವಾ ಆಡಳಿತ ವಹಿಸಲು ಬಿಜೆಪಿ ಸಿದ್ಧವಾಗಿದೆ, ಈ ನುಡುವೆ ಗದ್ದಲದಿಂದಾಗಿ ವಿಧಾನಸಭೆ ಸೋಮವಾರಕ್ಕೆ ಮುಂದೂಡಲಾಗಿದೆ.
ಕಳೆದ ರಾತ್ರಿ ಸಂಭವಿಸಿದ ದಿಢೀರ್ ಬೆಳವಣಿಗೆಗಳಿಂದಾಗಿ ಕಾಂಗ್ರೆಸ್ ಮೈತ್ರಿಕೂಟದ ಕಾಮತ್ ಸರ್ಕಾರ ಪತನ ಅಂಚಿನಲ್ಲಿದೆ. ಈ ನಡುವೆ ಸರ್ಕಾರ ಬಹುಮತ ಕಳೆದುಕೊಂಡಿದ್ದು ರಾಜೀನಾಮೆ ನೀಡಬೇಕೆಂದು ವಿಪಕ್ಷ ಬಿಜೆಪಿ ನೇತೃತ್ವದ ಪ್ರಜಾತಾಂತ್ರಿಕ ಮಿತ್ರ ಪಕ್ಷಗಳು ಆಗ್ರಹಿಸಿವೆ.
ವಿಪಕ್ಷದ ಗದ್ದಲದ ನಡುವೆ ಅಯೋಮಯವಾತಾವರಣ ನಿರ್ಮಾಣವಾಗಿರುವುದರಿಂದ ವಿಧಾನ ಸಭಾಧಿವೇಶನವನ್ನು ಮುಂದಿನ ಸೋಮವಾರದ ವರೆಗೆ ಮುಂದೂಡಿರುವುದಾಗಿ ಸಭಾಧ್ಯಕ್ಷರು ಇಂದು ಘೋಷಿಸಬೇಕಾಗಿ ಬಂತು.
ತನ್ಮಧ್ಯೆ, ಹಾಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಬಹುಮತ ಕಳೆದು ಕೊಂಡಿರುವುದರಿಂದ ಅವರನ್ನು ಬರ್ಕಾಸ್ತುಗೊಳಿಸಿ, ಬಹುಮತವಿರುವ ನಮಗೆ ಅವಕಾಶ ನೀಡಬೇಕೆಂದು ಬಿಜೆಪಿ ಹೇಳಿಕೆ ನೀಡಿದೆ. ರಾಜೀನಾಮೆ ನೀಡಿದ ಶಾಸಕರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ನಿಚ್ಚಳವಾಗಿದೆ.
|