ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಒಳಉಡುಪು ಜಾಹೀರಾತುಗಳಿಗೆ ತಡೆ
ದೇಶದ ಮಾಹಿತಿ ಹಾಗೂ ಪ್ರಸಾರ ಮಂತ್ರಾಲಯ ಸರ್ಕಾರಿ ಹಾಗೂ ಖಾಸಗಿ ದೂರದರ್ಶನ ವಾಹಿನಿಗಳಲ್ಲಿ ಪ್ರಸಾರವಾಗಲು ಇಲಾಖೆಗಳಿಂದ ಅನುಮತಿ ಪಡೆದಿದ್ದ ಎರಡು ಒಳಉಡುಪು ಜಾಹೀರಾತುಗಳ ಪ್ರದರ್ಶನವನ್ನು ತಡೆಹಿಡಿದಿದೆ.

ಜಾಹೀರಾತುಗಳ ಪಠ್ಯ-ದೃಶ್ಯಗಳಲ್ಲಿ ನಿಯಂತ್ರಣ ಹೇರುವ ಕ್ರಮಗಳ ಅಂಗವಾಗಿ ಕೇಂದ್ರಸರ್ಕಾರದ ಮಾಹಿತಿ ಹಾಗೂ ಪ್ರಸಾರ ಇಲಾಖೆಯು ಕ್ರಮಕೈಗೊಂಡಿದ್ದು, ಜಾಹೀರಾತುಗಳ ನಿಯಂತ್ರಣ ಇಲಾಖೆ ಪ್ರದರ್ಶನ ಪ್ರಮಾಣ ಪತ್ರ ನೀಡಿದ ಜಾಹೀರಾತುಗಳಿಗೇ ಈಗ ತಡೆ ವಿಧಿಸಿರುವುದು ವಿಶೇಷ ಗಮನ ಸೆಳೆದಿದೆ.

ಸಿದ್ಧಒಳಉಡುಪು ಬ್ರಾಂಡ್‌ಗಳಾದ ಲಕ್ಸ್ ಕೋಝಿ ಹಾಗೂ ಅಮುಲ್ ಮ್ಯಕೊ ಗಳ ಜಾಹೀರಾತು ಪ್ರದರ್ಶನಕ್ಕೆ ಕೇಂದ್ರ ಪ್ರಸಾರ ಇಲಾಖೆ ತಡೆಯೊಡ್ಡಿದೆ.

ಜಾಹೀರಾತುಗಳಲ್ಲಿ ಗುಣಮಟ್ಟವಿರಬೇಕು, ಅವುಗಳ ಪಠ್ಯಸಭ್ಯವಾಗಿರಬೇಕು ಎಂಬಿತ್ಯಾದಿ ನೆಪಗಳನ್ನು ಪ್ರಸಾರ ಇಲಾಖೆ ನೀಡಿದೆ. ಈ ಜಾಹೀರಾತುಗಳಿಗೆ ಸರ್ಕಾರಿ ಸ್ವಾಯತ್ತ ಸಂಸ್ಥೆಯಾದ ಭಾರತೀಯ ಜಾಹೀರಾತುಗಳ ಗುಣಮಟ್ಟ ನಿಯಂತ್ರಣ ಸಮಿತಿ ನಿರಪೇಕ್ಷಣಾ ಪ್ರಮಾಣ ನೀಡಿತ್ತು. ಆದರೂ ತಡೆಯಲಾಗಿದೆ.

ಭಾರತ ಸರ್ಕಾರದ ಪ್ಪರಸಾರ ಕಾಯ್ದೆ ಕೇಬಲ್ ಟೆಲೆವಿಷನ್ ನೆಟ್ವರ್ಕ್ಸ್ (ರೆಗುಲೇಷನ್) ಆಕ್ಟ್ -1995ರನ್ವಯ ಈ ಕ್ರಮ ಜರುಗಿಸಲಾಗಿದೆ. ಮುಂದಿನ ಆದೇಶದ ವರೆಗೆ ಪ್ರಸ್ತುತ ಜಾಹೀರಾತುಗಳನ್ನು ಟಿವಿಗಳಲ್ಲಿ ಪ್ರದರ್ಶಿಸದಂತೆ ಆದೇಶದಲ್ಲಿ ತಿಳಿಸಲಾಗಿದೆ.
ಮತ್ತಷ್ಟು
ಗೋವಾ: ಬಿಜೆಪಿ ಸಿದ್ಧತೆ, ವಿಧಾನಸಭೆ ಗದ್ದಲ
ತಾರತಮ್ಯದ ವಿರುದ್ದ ಹೋರಾಟ: ಬೇಡಿ
ಕಾರ್ಗಿಲ್ ಸ್ಮರಣೆ:ವಿಜಯೋತ್ಸವ
ಇಬ್ಬರು ಉಲ್ಫಾ ಬಾಂಬರ್‌ಗಳು ಬಲಿ
ಆ.7: ಒಬಿಸಿ ಮೀಸಲಾತಿ ವಿಚಾರಣೆ
ಗೋವಾ: ಪತನದಂಚಿನಲ್ಲಿ ದಿಗಂಬರ್ ಸರ್ಕಾರ