ಮುಂಬೈ ಸರಣಿ ಬಾಂಬ್ ಸ್ಫೋಟ(1993) ಪ್ರಕರಣದ ಆರೋಪಿಗಳ ವಿಚಾರಣೆ ನಡೆಸುತ್ತಿರುವ ವಿಶೇಷ ಟಾಡಾ ನ್ಯಾಯಾಲಯವು ಪ್ರಮುಖ ಆರೋಪಿ ಟೈಗರ್ ಮೆಮನ್ ಕುಟುಂಬಕ್ಕೆ ಮೊದಲ ಶಾಕ್ ನೀಡಿದ್ದು, ಕುಟುಂಬ ಸದಸ್ಯನಿಗೆ ಮರಣದಂಡನೆ ವಿಧಿಸಿದೆ.
ಟೈಗರ್ ಮೆಮನ್ ಕುಟುಂಬ ಸದಸ್ಯ ಯಾಕೂಬ್ ಮೆಮನ್‌ಗೆ ಇದೀಗ ಮರಣದಂಡನೆ ಶಿಕ್ಷೆ ನೀಡಲಾಗಿದ್ದು, ವೃತ್ತಿಯಲ್ಲೀತ ಲೆಕ್ಕಪರಿಶೋಧಕನಾಗಿದ್ದನು.
ಕೃತ್ಯದ ಪ್ರಥಮ ಕುಟುಂಬ ಎಂದೇ ಕುಖ್ಯಾತಿಗಳಿಸಿರುವ ಟೈಗರ್ ಕುಟುಂಬದ ಇತರ ಸದಸ್ಯರಾದ ಇಸ್ಸಾ,ಯೂಸುಫ್ ಹಾಗೂ ರುಬೀನಾ ಎಂಬವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮರಣಶಿಕ್ಷೆಗೀಡಾಗಿರುವ ಯಾಕೂಬ್ ಸ್ಫೋಟದ ಸಂಚು ನಡೆಸಿ ಮುನ್ನಾದಿನ ಕುಟುಂಬ ಸಹಿತ ದುಬೈಗೆ ಪಲಾಯನ ಗೈದಿದ್ದನು. ಕೊನೆಗೆ 1994ರ ಜುಲೈಯಲ್ಲಿ ಸಿಬಿಐ ತನಿಖಾ ತಂಡದ ಮುಂದೆ ಶರಣಾಗಿದ್ದನು. ಶಸ್ತ್ರಾಸ್ತ್ರ ಸನ್ನಾಹ ಹಾಗೂ ಕೃತ್ಯಕ್ಕೆ ಹಣಹೂಡಿದ ಆರೋಪ ಈತನ ಮೇಲಿದೆ.
ಮರಣದಂಡನೆ ತೀರ್ಪು ಓದಿ ಹೇಳುತ್ತಿದ್ದಂತೆಯೇ ಯಾಕೂಬ್ ವಿಶೇಷ ನ್ಯಾಯಾಧೀಶ ಪಿ ಡಿ ಕೋಡೆಯವರತ್ತ ಎಗರಾಡಿ 'ದೇವರೇ ಈತನನ್ನು ಕ್ಷಮಿಸು ಈತ ತಾನೇನು ಮಾಡುತ್ತಿದ್ದೇನೆಂದು ಅರಿತಿಲ್ಲ' ಎಂಬ ನಾಟಕೀಯ ಹೇಳಿಕೆಗಳನ್ನು ಉದ್ಘರಿಸಿದನು.
ಆತನನ್ನು ಯೂಸೂಫ್ ಮೌನಪಾಲಿಸಲು ಗದುಮಿದರೂ ಒದರುತ್ತಿದ್ದುದು ಕಂಡುಬಂತು,ರುಬೀನಾ ಮತ್ತಿತರರು ನ್ಯಾಯಾಂಗಣದಿಂದ ಹೊರ ಕರೆದೊಯ್ದರು.
ರುಬೀನಾ ತನ್ನ ಮಾರುತಿ ಕಾರನ್ನು ಆರೋಪಿಗಳ ಬಳಕೆ ನೀಡಿದ ಪುರಾವೆಯ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಇದರೊಂದಿಗೆ ಪ್ರಮುಖ ಕೃತ್ಯವೊಂದರ, ಮುಖ್ಯ ರೂವಾರಿ ಕುಟುಂಬ ಕಾನೂನಿನ ನ್ಯಾಯಜರಡಿಯಲ್ಲಿ ಸಿಕ್ಕಿ ಹಾಕಿಕೊಂಡಂತಾಗಿದೆ.
|