ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮುಖ್ಯಮಂತ್ರಿ ಹತ್ಯೆ:6ಮಂದಿಗೆ ಶಿಕ್ಷೆ
ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದ ಬಿಯಾಂತ್ ಸಿಂಗ್ ಅವರ ಹತ್ಯಾರೋಪಿಗಳಾದ ಆರುಮಂದಿಯನ್ನು ಶಿಕ್ಷಿಸಿರುವ ಸಿಬಿಐ ವಿಶೇಷ ನ್ಯಾಯಾಲಯವು ಒಬ್ಬನನ್ನು ಖುಲಾಸೆಗೊಳಿಸಿದ್ದು, ಶಿಕ್ಷೆಘೋಷಣೆ ನಾಳೆಗೆ ಕಾದಿರಿಸಲಾಗಿದೆ.

ಶಿಕ್ಷೆಗೀಡಾಗಿರುವ ಹತ್ಯಾರೋಪಿಗಳನ್ನು ಜಗತ್ವಾರ್ ಸಿಂಗ್ ಹವಾರ, ಬಲವಂತ್ ಸಿಂಗ್,ಶಾಮ್ಷೇರ್ ಸಿಂಗ್,ಲಖ್ವೀಂದರ್ ಸಿಂಗ್ ಹಾಗೂ ಗುರ್ಮೀಟ್ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನೋರ್ವ

ಭಾರತೀಯ ದಂಡಸಂಹಿತೆ 302ನೇ ಕಲಂ ವಿಧಿಯನ್ವಯ ಆರೋಪಿಗಳನ್ನು ಕೊಲೆಕೃತ್ಯಕ್ಕಾಗಿ ಶಿಕ್ಷಿಸಲಾಗಿದೆ. ಇವರಲ್ಲಿ ಕೆಲವರಿಗೆ ಹತ್ಯಾಯತ್ನ(ವಿಧಿ307), ಅಪರಾಧ ಸಂಚು(120ಬಿ) ಇತ್ಯಾದಿಗಳಿಗಾಗಿ ಶಿಕ್ಷೆ ವಿಧಿಸಲಾಗಿದೆ.

ತನ್ಮಧ್ಯೆ ಆರೋಪಿ ನಸೀಬ್ ಸಿಂಗ್‌ಗೆ ಸ್ಫೋಟಕ ವಸ್ತು ದುರ್ಬಳಕೆ ನಿಷೇಧ ಕಾಯ್ದೆಯಡಿ ಶಿಕ್ಷಿಸಲಾಗಿದೆ. ಆರೋಪಿಗಳ ವಿಚಾರಣೆಯನ್ನು ವಿಶೇಷ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ್ ಸೋಂಧಿ ನಡೆಸಿದ್ದರು.

ಶಿಕ್ಷಾ ತೀರ್ಪು ಪ್ರಕಟಿಸುವ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯದ ಸುತ್ತ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮತ್ತಷ್ಟು
ಮುಂಬೈಸ್ಫೋಟ:ಟೈಗರ್‌ಗುಂಪಿಗೆ ಗಲ್ಲು
ಕರುಣಾನಿಧಿಗೆ ಮುಸ್ಲಿಂ ಉಗ್ರರ ಬೆದರಿಕೆ
ಗುರುವಾಯೂರು:ಮಹಿಳಾ ವಸ್ತ್ರಸಂಹಿತೆ ಬದಲು
ಒಳಉಡುಪು ಜಾಹೀರಾತುಗಳಿಗೆ ತಡೆ
ಗೋವಾ: ಬಿಜೆಪಿ ಸಿದ್ಧತೆ, ವಿಧಾನಸಭೆ ಗದ್ದಲ
ತಾರತಮ್ಯದ ವಿರುದ್ದ ಹೋರಾಟ: ಬೇಡಿ