ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಗೋವಾ ಬಿಜೆಪಿಗೆ ಬಿಡಿ:ರಾಜ್‌ನಾಥ್ ಸಿಂಗ್
ಗೋವಾರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ಮೈತ್ರಿ ಕೂಟ ಸರ್ಕಾರವು ಬಹುಮತ ಕಳೆದುಕೊಂಡಿರುವುದರಿಂದ ಬಿಜೆಪಿ ನೇತೃತ್ವದ ಗೋವಾ ಪ್ರಜಾತಾಂತ್ರಿಕ ಒಕ್ಕೂಟಕ್ಕೆ ಸರ್ಕಾರರಚನೆಗೆ ಅವಕಾಶ ನೀಡಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಸಿಂಗ್ ಗೋವಾದಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿರುವ ದಿಗಂಬರ ಕಾಮತ್ ಮುಖ್ಯಮಂತ್ರಿಯಾಗಿರುವ ಸರ್ಕಾರಕ್ಕೆ ಐದು ಮಂದಿ ಶಾಸಕರ ರಾಜಿನಾಮೆಯಿಂದಾಗಿ ಬಹುಮತದ ಕೊರತೆಯುಂಟಾಗಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಈಗ ಬಹುಮತವಿದೆ. ಈ ಕುರಿತು ಬೆಂಬಲಿತ ಶಾಸಕರು ರಾಜ್ಯಪಾಲರಿಗೆ ಲಿಖಿತ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಬರ್ಕಾಸ್ತುಗೊಳಿಸಿ ಬಿಜೆಪಿಗೆ ಅವಕಾಶ ನೀಡಬೇಕು, ಅಗತ್ಯವೆಂದಾದರೆ ಬೆಂಬಲದ ಶಾಸಕರನ್ನು ರಾಜಭವನಕ್ಕೆ ಕರೆತಂದು ಸಾಬೀತುಪಡಿಸುವುದಾಗಿ ಸಿಂಗ್ ತಿಳಿಸಿದ್ದಾರೆ.

ಕಳೆದ ದಿನ ವಿಧಾನ ಸಭಾಧಿವೇಶನವನ್ನು ಸ್ಥಗಿತಗೊಳಿಸಿ ಸೋಮವಾರಕ್ಕೆ ಕಲಾಪ ಮುಂದೂಡಿದ ಅಧ್ಯಕ್ಷ ಪ್ರತಾಪಸಿಂಹ ರಾಣೆಯ ಕ್ರಮ ಸರಿಯಲ್ಲ, ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ಇದು ಅಗತ್ಯವಿರಲಿಲ್ಲ, ಈ ಕಾರಣಗಳಿಂದ ಕಾಂಗ್ರೆಸ್‌ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಪ್ರಯತ್ನಿಸುತ್ತಿದೆ ಎಂದು ಸಿಂಗ್ ಆರೋಪಿಸಿದ್ದಾರೆ.

ಮತ್ತಷ್ಟು
ಮುಖ್ಯಮಂತ್ರಿ ಹತ್ಯೆ:6ಮಂದಿಗೆ ಶಿಕ್ಷೆ
ಮುಂಬೈಸ್ಫೋಟ:ಟೈಗರ್‌ಗುಂಪಿಗೆ ಗಲ್ಲು
ಕರುಣಾನಿಧಿಗೆ ಮುಸ್ಲಿಂ ಉಗ್ರರ ಬೆದರಿಕೆ
ಗುರುವಾಯೂರು:ಮಹಿಳಾ ವಸ್ತ್ರಸಂಹಿತೆ ಬದಲು
ಒಳಉಡುಪು ಜಾಹೀರಾತುಗಳಿಗೆ ತಡೆ
ಗೋವಾ: ಬಿಜೆಪಿ ಸಿದ್ಧತೆ, ವಿಧಾನಸಭೆ ಗದ್ದಲ