ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಂಜಯ್‌ಗೆ ಶಿಕ್ಷೆ: ಟಾಡಾ ಟಾಟಾ
ಮುಂಬೈ1993 ಸರಣಿ ಸ್ಫೋಟದ ವಿಚಾರಣೆ ಮುಕ್ತಾಯ
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಂಜಯ್‌ದತ್‌ಗೆ ಶಿಕ್ಷೆಯಾಗಿದ್ದು,ವಿಚಾರಣೆ ನಡೆಸಿದ ವಿಶೇಷ ಟಾಡಾ ನ್ಯಾಯಾಲಯವು ತೀರ್ಪನ್ನು ಜುಲೈ 31ಕ್ಕೆ ಕಾದಿರಿಸಿದೆ. ಇದರೊಂದಿಗೆ ಟಾಡಾ ನ್ಯಾಯಾಲಯ ಸರಣಿ ಸ್ಫೋಟ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಲಿದೆ.

1993ರ ಸರಣಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿ ನಿಷೇಧಿತ ಶಸ್ತ್ರಾಸ್ತ್ರ ಅಕ್ರಮ ದಾಸ್ತಾನು ಕುರಿತಂತೆ ಸಂಜಯ್‌ದತ್ ವಿರುದ್ಧ ಆರೋಪಪಟ್ಟಿ ನ್ಯಾಯಾಲಯದಲ್ಲಿ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಟಾಡಾ ನ್ಯಾಯಾಲಯದ ನ್ಯಾಯಾಧೀಶ ಪಿ ಡಿ ಕೋಡೆ, ಶುಕ್ರವಾರಕ್ಕೆ ಎಲ್ಲಾ ಆರೋಪಿಗಳ ವಿಚಾರಣೆ ಹಾಗೂ ತೀರ್ಪನ್ನು ಮುಗಿಸಿದ್ದಾರೆ. ತೀರ್ಪು ಬಹಿರಂಗಗೊಳಿಸಲು ಬಾಕಿ ಇರುವುದೆಂದರೆ ಸಂಜಯ್‌ದತ್ ಹಾಗೂ ಸಹವರ್ತಿಗಳಾದ ಯೂಸುಫ್ ನುಲ್ಲವಾಲ,ರುಸಿ ಮುಲ್ಲಾ,ಕೆರ್ಸಿ ಅಡ್ಜಾನಿಯಾ ಇವರು ಮಾತ್ರ.

ನ್ಯಾಯಾಲಯಕ್ಕೆ ಹಾಜರಾಗಿದ್ದ ಸಂಜಯ್‌ದತ್‌ಗೆ ಅಕ್ರಮ ಶಸ್ತ್ರದಾಸ್ತಾನು ಆರೋಪಕ್ಕಾಗಿ ಶಿಕ್ಷೆಯಾಗಿದೆ. ಈ ಕುರಿತು ಶಿಕ್ಷೆಯನ್ನು ಮಂಗಳವಾರದಂದು ಘೋಷಿಸಲಾಗುತ್ತಿದೆ, ಅಂದು ದತ್‌ ಹಾಜರಾಗುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಜುಲೈ 31ರಂದು ಸಂಜಯ್‌ದತ್‌ ಕುರಿತ ತೀರ್ಪಿನೊಂದಿಗೆ 257 ಮಂದಿಯ ಜೀವ ಬಲಿ ತೆಗೆದುಕೊಂಡು, 700 ಮಂದಿ ಗಾಯಾಳುಗಳಾದ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ತೀರ್ಪನ್ನು ವಿಶೇಷ ನ್ಯಾಯಾಲಯ ಮುಕ್ತಾಯಗೊಳಿಸಲಿದೆ. ಈ ವರೆಗೆ 100 ಮಂದಿಯ ವಿಚಾರಣೆ ನಡೆಸಿದ್ದು, ಇದರಲ್ಲಿ 11 ಮಂದಿಗೆ ಮರಣದಂಡನೆ ಯಾಗಿರುವುದು ನಿರ್ಣಾಯಕ ಘಟನೆಯಾಗಿದೆ.

ಮರಣದಂಡನೆಗೀಡಾದವರಲ್ಲಿ ಪೈಶಾಚಿಕ ಕೃತ್ಯದ ರೂವಾರಿ ಟೈಗರ್ ಮೇಮನ್ ಸೋದರ ಯಾಕೂಬ್ ಕೂಡ ಸೇರಿದ್ದಾನೆ. ಇತರ ಸೋದರರಿಗೆ ಜೀವವಧಿ ಶಿಕ್ಷೆಯಾಗಿದೆ.
ಮತ್ತಷ್ಟು
ಗೋವಾ ಬಿಜೆಪಿಗೆ ಬಿಡಿ:ರಾಜ್‌ನಾಥ್ ಸಿಂಗ್
ಮುಖ್ಯಮಂತ್ರಿ ಹತ್ಯೆ:6ಮಂದಿಗೆ ಶಿಕ್ಷೆ
ಮುಂಬೈಸ್ಫೋಟ:ಟೈಗರ್‌ಗುಂಪಿಗೆ ಗಲ್ಲು
ಕರುಣಾನಿಧಿಗೆ ಮುಸ್ಲಿಂ ಉಗ್ರರ ಬೆದರಿಕೆ
ಗುರುವಾಯೂರು:ಮಹಿಳಾ ವಸ್ತ್ರಸಂಹಿತೆ ಬದಲು
ಒಳಉಡುಪು ಜಾಹೀರಾತುಗಳಿಗೆ ತಡೆ