ತಮಿಳ್ನಾಡಿನ ಪ್ರಮುಖನಗರ ಕೊಯಂಬತ್ತೂರಿನಲ್ಲಿ 1998ರಲ್ಲಿ ಸಂಭವಿಸಿದ ಸ್ಫೋಟದ ಪ್ರಮುಖ ರೂವಾರಿ ಎಂಬ ಆರೋಪ ಹೊತ್ತಿರುವ ಕೇರಳದ ಪಿಡಿಪಿ ನಾಯಕ ಅಬ್ದುಲ್ ನಾಸರ್ ಮದನಿ ಹಾಗೂ ಸಹವರ್ತಿಗಳ ವಿಚಾರಣೆ ಆಗಸ್ಟ್ 1ರಂದು ಜರುಗಲಿದೆ.
ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ, ಕೇರಳ ಹಾಗೂ ತಮಿಳ್ನಾಡು, ಆಂಧ್ರಪ್ರದೇಶ ರಾಜ್ಯಗಳಿಂದ ಮದನಿಯೂ ಸೇರಿದಂತೆ ಸುಮಾರು 167 ಮಂದಿಯನ್ನು ಬಂಧಿಸಿ ಜೈಲಿಗೆ ಸೇರಿಸಲಾಗಿದೆ. ಇವರಲ್ಲೊಬ್ಬ ಕ್ಷಮಾರ್ಹ ಸಾಕ್ಷಿದಾರನಾಗಿ ಬದಲಾದುದರಿಂದ 166 ಮಂದಿಯ ವಿಚಾರಣೆ ನಡೆಯಲಿದೆ.
ಮುಂಬೈ ಸರಣಿ ಬಾಂಬ್ ಸ್ಫೋಟದಂತೆ ಅತಿ ಅಮಾನುಷ ಹಾಗೂ ಜನರಲ್ಲಿ ಕುತೂಹಲ ಮೂಡಿಸಿದ ಕೊಯಂಬತ್ತೂರು ಸ್ಫೋಟ ಪ್ರಕರಣದಲ್ಲಿ ಮದನಿ ಹಾಗೂ ಇತರ ಶಾಮೀಲಾತಿ ಕುರಿತ ವಿಚಾರಣೆ ಆ.1ರಂದು ನಡೆಯಲಿದ್ದು, ತಪ್ಪಿತಸ್ತರ ಶಿಕ್ಷೆ ಆಗಸ್ಟ್ 6ರಂದು ಘೋಷಣೆಯಾಗಲಿದೆ.
1998ರಲ್ಲ್ಲಿಸಂಭವಿಸಿದ ಕೊಯಂಬತ್ತೂರು ಸ್ಫೋಟದಲ್ಲಿ 58 ಮಂದಿ ಸಾವನ್ನಪ್ಪಿದ್ದು, 250ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದರು. ಪ್ರಮುಖ ಆರೋಪಿ ಮದನಿ ಕಳೆದ 8 ವರ್ಷಗಳಿಂದ ಕೊಯಂಬತ್ತೂರು ಜೈಲಲ್ಲಿ ಸೆರೆಯಲ್ಲಿದ್ದಾನೆ.
|