ಗೋವಾದಲ್ಲಿ ಬಹುಮತ ಕಳೆದುಕೊಂಡಿರುವ ಕಾಂಗ್ರೆಸ್ಮೈತ್ರಿಕೂಟ ಸರ್ಕಾರವನ್ನು ರದ್ದುಪಡಿಸಲು ಆಗ್ರಹಿಸಿರುವ ವಿಪಕ್ಷ ಬಿಜೆಪಿ ಮಿತ್ರಪಕ್ಷಗಳು, ತಮ್ಮ ಬಹುಮತ ಸಾಬೀತು ಪಡಿಸಲು ಶಾಸಕರೊಂದಿಗೆ ಇಂದು ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದಾರೆ.
ಬಿಜೆಪಿ ನೇತೃತ್ವದ ಗೋವಾ ಪ್ರಜಾತಾಂತ್ರಿಕ ಒಕ್ಕೂಟ(ಜಿಪಿಎ)ದ 21 ಮಂದಿ ಶಾಸಕರು ಇಂದು ರಾಷ್ಟ್ರಪತಿ ಭವನಕ್ಕೆ ಭೇಟಿ, ತಮ್ಮ ಬಹುಮತವನ್ನು ಸಾಬೀತು ಪಡಿಸಲು ಬೆಂಬಲಿತ ಶಾಸಕರನ್ನು ಪ್ರದರ್ಶಿಸುವರೆಂದು ಸುದ್ದಿಸಂಸ್ಥೆಯ ವರದಿ ತಿಳಿಸಿದೆ.
ಆಡಳಿತಾರೂಢ ಸರ್ಕಾರದ 5 ಮಂದಿ ಶಾಸಕರು ದಿನಗಳ ಹಿಂದೆ ರಾಜೀನಾಮೆ ನೀಡಿರುವುದರಿಂದ ಮುಖ್ಯಮಂತ್ರಿ ದಿಗಂಬರ ಕಾಮತ್ ನೇತೃತ್ವದ ಸರ್ಕಾರ ಬಹುಮತ ಕಳೆದು ಕೊಂಡಿದೆ, ಆದರೆ ರಾಜೀನಾಮೆ ನೀಡುವ ಬದಲು ರಾಷ್ಟ್ರಪತಿ ಆಳ್ವಿಕೆ ಹೇರಲು ಪ್ರಯತ್ನಿಸುತ್ತಿದೆ ಎಂಬುದು ಬಿಜೆಪಿ ನಾಯಕರ ಆರೋಪ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸೇತರ ಸರ್ಕಾರ ರಚನೆಗಾಗಿ ಶಾಸಕರ ಬೆಂಬಲವನ್ನು ಸಾಬೀತು ಪಡಿಸಲು ಹಾಗೂ ಬಹುಮತ ಪ್ರದರ್ಶನಕ್ಕಾಗಿ ಇಂದು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವರೆಂದು ಪ್ರಕಟಣೆ ತಿಳಿಸಿದೆ.
|