ಪ್ರತಿಭಟನಾ ನಿರತರ ಮೇಲೆ ಪೊಲೀಸರು ಗೋಲಿಬಾರ್ ಮಾಡಿ 8ಮಂದಿಯನ್ನು ಹತ್ಯೆಗೈದಿರುವುದನ್ನು ವಿರೋಧಿಸಿರುವ ಎಡಪಕ್ಷಗಳು ಇಂದು ಆಂಧ್ರಪ್ರದೇಶ ಬಂದ್‌ಗೆ ಕರೆ ನೀಡಿವೆ. ಆಂಧ್ರದ ಖಮ್ಮಾಮ್ ನಗರದಲ್ಲಿ ಶುಕ್ರವಾರ ಸಂಜೆ ಪೊಲೀಸರು ನಡೆಸಿದ ಗೋಲಿಬಾರಿಗೆ ಎಂಟು ಮಂದಿ ಬಲಿಯಾಗಿದ್ದರು.
ಇಲ್ಲಿನ ಬಡವರಿಗೆ ಸರಕಾರ ಭೂಮಿ ಮರುಹಂಚಿಕೆ ಹಾಗೂ ಪುರ್ವವಸತಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದು,ಅದು ವಿಳಂಬವಾಗಿರುವುದನ್ನು ಖಂಡಿಸಿ ಖಮ್ಮಾಮ್ ನಗರದಲ್ಲಿ ಸಿಪಿಐ,ಸಿಪಿಐಎಂ ಕಾರ್ಯಕರ್ತರು ಸೇರಿದಂತೆ ಸುಮಾರು ಒಂದು ಸಾವಿರ ಮಂದಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಗೋಲಿಬಾರ್ ನಡೆಸಿದ್ದರು.
ಖಮ್ಮಾಮ್ ಸಿಪಿಐ,ಸಿಪಿಐಎಂ ಸೇರಿದಂತೆ ಎಡಪಕ್ಷ ಪ್ರಾಬಲ್ಯ ಹೊಂದಿರುವ ಪ್ರದೇಶವಾಗಿದೆ.ಘಟನಾ ಸ್ಥಳಕ್ಕೆ ಸಿಪಿಐಎಂ ಮುಖಂಡ ಸೀತಾರಾಂ ಯೆಚೂರಿ ಮತ್ತು ಆಂಧ್ರ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಇಂದು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಗೋಲಿಬಾರ್ ಘಟನೆಯನ್ನು ನ್ಯಾಯಾಂಗ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.
|