ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಗೋವಾ:ಅನರ್ಹತೆಗಾಗಿ ರಾಜಕೀಯ ಸಮರ
ಐವರು ಶಾಸಕರ ರಾಜೀನಾಮೆಯಿಂದ ರಾಜಕೀಯ ಅತಂತ್ರತೆಯಲ್ಲಿರುವ ಗೋವಾ ರಾಜ್ಯದಲ್ಲಿ , ಇದೀಗ ವಿಧಾನ ಸಭಾಧ್ಯಕ್ಷರ ಮುಂದೆ 'ಅನರ್ಹತೆ'ಗಾಗಿ ಪಕ್ಷಗಳು ರಾಜಕೀಯ ಸಮರ ಆರಂಭಿಸಿವೆ.

ಐದು ಮಂದಿ ಸದಸ್ಯರನ್ನು ಅನರ್ಹರಾಗಿಸಲು (ಪಕ್ಷನಿಷ್ಠಾಂತರಕ್ಕಾಗಿ) ವಿನಂತಿಸುವ ಅರ್ಜಿ ವಿಧಾನ ಸಭಾಧ್ಯಕ್ಷ ಪ್ರತಾಪ ಸಿಂಹ ರಾಣೆಯವರ ಮುಂದಿರುವಂತೆಯೇ , ಇಂದು ಸಂಜೆಯೊಳಗೆ 40 ಸದಸ್ಯ ವಿದಾನ ಮಂಡಳದಲ್ಲಿ , ಹಾಲಿ ಕಾಂಗ್ರೆಸ್ ಮೈತ್ರಿಕೂಟದ ದಿಗಂಬರ ಕಾಮತ್ ಸರ್ಕಾರ ವಿಶ್ವಾಸ ಮತಯಾಚನೆ ನಡೆಸಲಿದೆ.

ಕಳೆದ ವಾರ ಐದು ಮಂದಿ ಶಾಸಕರು ಆಡಳಿತಾರೂಡ ದಿಗಂಬರ ಕಾಮತ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆಯುವುದರೊಂದಿಗೆ ಕಾಂಗ್ರೆಸ್ ಮೈತ್ರಿಕೂಟದ ಗದ್ದುಗೆ ಬಹುಮತ ಕಳೆದುಕೊಂಡಿತ್ತು.

ಆ ಬಳಿಕ ಹೊರ ಬಂದ ಶಾಸಕರು ಬಿಜೆಪಿ ನೇತೃತ್ವದ ಗೋವಾ ಪ್ರಜಾ ತಾಂತ್ರಿಕ ಒಕ್ಕೂಟ(ಜಿಡಿಎ) ತಮಗೆ ಬಹುಮತವಿದೆ, ಅಧಿಕಾರ ನೀಡಬೇಕೆಂದು ರಾಷ್ಟ್ರಪತಿಯ ಮುಂದೆ ಬಲಪ್ರದರ್ಶನ ನಡೆಸಿದ್ದರು. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು ರಾಷ್ಟ್ರಪತಿ ಆಡಳಿತ ಜಾರಿಗಾಗಿ ಕಾಂಗ್ರೆಸ್ ಪ್ರಯತ್ನ ಆರಂಭಿಸಿದೆ.

ಈ ನಡುವೆ ವಿಧಾನಸಭಾಧ್ಯಕ್ಷ ಪ್ರತಾಪ ಸಿಂಹ ರಾಣೆ ಅವರ ಮುಂದೆ ಹೊಸ ಸಮಸ್ಯೆಗಳು ಸಾಂವಿಧಾನಿಕ ತೀರ್ಪಿಗಾಗಿ ಬಂದಿವೆ. ಪಕ್ಷೇತರ ಅಭ್ಯರ್ಥಿಯಾಗಿರುವ ವಿಶ್ವಜಿತ್ ರಾಣೆ(ಪ್ರತಾಪ ಸಿಂಹ ರಾಣೆಯ ಪುತ್ರ)ಯನ್ನು ಅನರ್ಹನೆಂದು ಘೋಷಿಸಲು ಬಿಜೆಪಿ ಆಗ್ರಹಿಸಿ ಅರ್ಜಿ ಸಲ್ಲಿಸಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಶಾಸಕನಾರ ವಿಶ್ವಜಿತ್ ಇದೀಗ ತಾನು ಕಾಂಗ್ರೆಸ್‌ಬೆಂಬಲಿಗ ಎಂದು ಘೋಷಿಸಿರುವುದರಿಂದ ಅನರ್ಹತೆ ಘೋಷಿಸಬೇಕೆಂಬುದು ಬಿಜೆಪಿ ವಾದ.

ಇದೇ ರೀತಿ ಸರ್ಕಾರದಿಂದ ಹೋರಬಂದ ಶಾಸಕರಾದ ವಿಕ್ಟೋರಿಯಾ ಅವರು ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿರುವುದರಿಂದ ಅವರ ಅವರನ್ನು ಅನರ್ಹರೆಂದು ಘೋಷಿಸಲು ಕಾಂಗ್ರೆಸ್ ಅರ್ಜಿಸಲ್ಲಿಸಿದೆ. ಆಡಳಿತ- ವಿಕ್ಷಗಳ ನಡುವೆ ಇಂತಹ ಪರಸ್ಪರ ಜಿದ್ದಿನ ಅರ್ಜಿಗಳ ಸಂಖ್ಯೆ 5ಕ್ಕೇರಿದೆ.
ಮತ್ತಷ್ಟು
ಬೆಂಗಳೂರಿಗೆ ಬಂದ ಹನೀಫ್
ಪೊಲೀಸ್ ಗೋಲಿಬಾರ್; ಆಂಧ್ರ ಬಂದ್‌ಗೆ ಕರೆ
ಅಪ್ಝಲ್ ದಯಾಭಿಕ್ಷೆಪತ್ರ ಲಭಿಸಿಲ್ಲ-ಕಲಾಂ
ರಾಷ್ಟ್ರಪತಿಯೆದುರು ಗೋವಾಬಿಜೆಪಿ ಪ್ರದರ್ಶನ
ಸ್ಫೋಟ: ಆಗಸ್ಟ್‌ನಲ್ಲಿ ಮದನಿ ವಿಚಾರಣೆ
ಸಂಜಯ್‌ಗೆ ಶಿಕ್ಷೆ: ಟಾಡಾ ಟಾಟಾ