ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಮರನಾಥ:26,000ಯಾತ್ರಿಕರು
ನಿಸರ್ಗ ಸುಂದರ ಹಾಗೂ ದೈವೀಕವಾಗಿರುವ ಅಮರನಾಥ ಸಂದರ್ಶನಕ್ಕಾಗಿ ಯಾತ್ರೆಯ ಹಂಗಾಮು ಮುಂದುವರಿದಿದ್ದು , ಇಂದು ಎರಡನೇ ತಂಡ 651 ಜನರೊಂದಿಗೆ ಹೊರಟಿದೆ.

ಪ್ರಸ್ತುತ ಗುಹಾಂತರ ದೇವಾಲಯ ಹಾಗೂ ಹಿಮನಿರ್ಮಿತ ಶಿವಲಿಂಗ ವಿರುವ ಸಂಕೀರ್ಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಶಸ್ತ್ರ ಭದ್ರತೆ ನೀಡಲಾಗಿದೆ.

ಇಂದು ಹೊರಟಿರುವ ಯಾತ್ರಾರ್ಥಿಗಳ ತಂಡದಲ್ಲಿ 410 ಮಂದಿ ಪುರುಷರು,134 ಮಂದಿ ಮಹಿಳೆಯರು ಹಾಗೂ 21 ಮಕ್ಕಳು, 86 ಮಂದಿ ಸನ್ಯಾಸಿಗಳು ಯಾತ್ರೆ ಆರಂಭಿಸಿದ್ದಾರೆ. ಯಾತ್ರಾರ್ಥಿಗಳಿಗೆ ಬಿಗುರಕ್ಷಣೆ ನೀಡಲಾಗಿದೆ.

ಯಾತ್ರಾರ್ಥಿಗಳು 15 ಬಸ್‌ಗಳು, 6 ಲಘುವಾಹನಗಳಲ್ಲಿ ತೆರಳಿದ್ದಾರೆ. ಈ ವಾಹನಗಳನ್ನು ಸುತ್ತುವರಿದು ಸುರಕ್ಷಾ ಭಟರ ಸೇನಾ ವಾಹನಗಳು ತೆರಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾತ್ರಾರ್ಥಿಗಳು ಪಹಲ್ಗಾಂ ಶಿಬಿರಕ್ಕೆ ಇಂದು ಸಂಜೆ ತಲುಪುವ ನಿರೀಕ್ಷೆ ಇದೆ. ನಾಳೆ ಅಮರನಾಥಾ ಗುಹಾಲಿಂಗ ದರ್ಶನಕ್ಕಾಗಿ ಪಾದಯಾತ್ರೆ ಆರಂಭಿಸುವರೆಂದು ಮೂಲಗಳು ತಿಳಿಸಿವೆ.

ಜುಲೈ 2 ರಿಂದ ಅಮರನಾಥ ಯಾತ್ರೆ ಆರಂಭವಾಗಿದ್ದು, ಪ್ರಸ್ತುತ ಯಾತ್ರಾರ್ಥಿಗಳ ತಂಡವೂ ಸೇರಿದಂತೆ 25,447 ಮಂದಿ ಭಕ್ತರು ಅಮರನಾಥಕ್ಕೆ ತೆರಳಿದ್ದಾರೆ.
ಮತ್ತಷ್ಟು
ಗೋವಾ:ಅನರ್ಹತೆಗಾಗಿ ರಾಜಕೀಯ ಸಮರ
ಬೆಂಗಳೂರಿಗೆ ಬಂದ ಹನೀಫ್
ಪೊಲೀಸ್ ಗೋಲಿಬಾರ್; ಆಂಧ್ರ ಬಂದ್‌ಗೆ ಕರೆ
ಅಪ್ಝಲ್ ದಯಾಭಿಕ್ಷೆಪತ್ರ ಲಭಿಸಿಲ್ಲ-ಕಲಾಂ
ರಾಷ್ಟ್ರಪತಿಯೆದುರು ಗೋವಾಬಿಜೆಪಿ ಪ್ರದರ್ಶನ
ಸ್ಫೋಟ: ಆಗಸ್ಟ್‌ನಲ್ಲಿ ಮದನಿ ವಿಚಾರಣೆ