ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವಲಸೆ ಕಾರ್ಮಿಕರಿಗೆ ಉಗ್ರರ ಎಚ್ಚರಿಕೆ
ಕಾಶ್ಮೀರದಲ್ಲಿರುವ ಹೊರನಾಡಿನ ಕಾರ್ಮಿಕರು ತಕ್ಷಣ ರಾಜ್ಯಬಿಟ್ಟು ತೆರಳಬೇಕೆಂದು ಕಾಶ್ಮೀರಿ ಭಯೋತ್ಪಾದಕರು ತಾಕೀತು ಮಾಡಿದ್ದಾರೆ.

ದಕ್ಷಿಣ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಲಾಂಗ್ಟೇ ಪ್ರದೇಶದಲ್ಲಿ ಇತ್ತೀಚೆಗೆ 14ರ ಹರೆಯದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಲಸೆ ಕಾರ್ಮಿಕರು ಆರೋಪಿಗಳಾಗಿದ್ದಾರೆಂಬುದೇ ಉಗ್ರರ ಹೊಸ ಬೆದರಿಕೆಗೆ ಕಾರಣ ಎನ್ನಲಾಗುತ್ತಿದೆ.

ಕಾಶ್ಮೀರಿ ಉಗ್ರರು ಈ ಎಚ್ಚರಿಕೆ ನೀಡಿರುವ ಬೆನ್ನಲ್ಲೇ, ಹುರಿಯತ್‌ ಕಾನ್ಫರೆನ್ಸ್‌ನ ಉದಾರವಾದಿ ಬಣದ ಅಧ್ಯಕ್ಷ ಮಿರ್ವೇಜ್ ಉಮರ್ ಫಾರೂಕ್ ಹೇಳಿಕೆ ನೀಡಿ, ಉಗ್ರರು ಇಂತಹ ಹೇಳಿಕೆ ನೀಡುವುದರಲ್ಲಿ ಅರ್ಥವಿಲ್ಲ, ಕಾಶ್ಮೀರದ ಜನರು ದೇಶದ ಇತರೆಡೆಯಲ್ಲಿದ್ದಾರೆ ಎಂಬುದನ್ನು ಗಮನಿಸಬೇಕು ಎಂದು ಎಚ್ಚರಿಸಿದ್ದಾರೆ.

ಆದರೆ ಉಗ್ರವಾದಿ ಹುರಿಯತ್‌ ಬಣದ ಮುಖಂಡ ಸೈಯದ್ ಆಲಿ ಷಾ ಗಿಲಾನಿ ನೀಡಿರುವ ಹೇಳಿಕೆಯಲ್ಲಿ ವಲಸೆ ಕಾರ್ಮಿಕರು ಕಾಶ್ಮೀರ ಬಿಟ್ಟು ತೊಲಗಲು ಅಂತಿಮ ಗಡುವು ನೀಡಲಾಗಿದೆ.

ವಲಸೆ ಕಾರ್ಮಿಕರಿಗೆ ರಾಜ್ಯತ್ಯಜಿಸುವಂತೆ ಗಿಲಾನಿ ನೀಡಿರುವ ಎಚ್ಚರಿಕೆಗೆ ದೇಶದ ಸಿಮಾ ಪ್ರದೇಶದ ಹಿಜ್ಬುಲ್ ಮುಜಾಹಿದೀನ್, ಜೈಶ್ ಇ ಮೊಹಮ್ಮದ್, ಲಷ್ಕರ್ ಇ ತೊಯ್ಬಾ ಉಗ್ರವಾದಿ ಸಂಘಟನೆಗಳು ಬೆಂಬಲ ನೀಡಿವೆ.

ಕಾಶ್ಮೀರದಲ್ಲಿ ಹೊಟ್ಟೆಪಾಡಿನ ಕೆಲಸಕ್ಕಾಗಿ ವರ್ಷಗಳಿಂದ ನೆಲೆಸಿರುವ ಕಾಶ್ಮೀರೇತರ ವಲಸೆ ಕಾರ್ಮಿಕರು ಇದೀಗ ಆತಂಕದಿಂದ ರಾಜ್ಯತೊರೆಯತೊಡಗಿದ್ದು, ತಮ್ಮ ಮೂಲ ರಾಜ್ಯಗಳತ್ತ ಹೊರಡುವ ಸಿದ್ಧತೆ ಆರಂಭಿಸಿದ್ದಾರೆ.
ಮತ್ತಷ್ಟು
ಅಮರನಾಥ:26,000ಯಾತ್ರಿಕರು
ಗೋವಾ:ಅನರ್ಹತೆಗಾಗಿ ರಾಜಕೀಯ ಸಮರ
ಬೆಂಗಳೂರಿಗೆ ಬಂದ ಹನೀಫ್
ಪೊಲೀಸ್ ಗೋಲಿಬಾರ್; ಆಂಧ್ರ ಬಂದ್‌ಗೆ ಕರೆ
ಅಪ್ಝಲ್ ದಯಾಭಿಕ್ಷೆಪತ್ರ ಲಭಿಸಿಲ್ಲ-ಕಲಾಂ
ರಾಷ್ಟ್ರಪತಿಯೆದುರು ಗೋವಾಬಿಜೆಪಿ ಪ್ರದರ್ಶನ