ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಇಸ್ಲಾಮಾಬಾದ್‌ನಲ್ಲಿ 600 ಮಾನವ ಬಾಂಬ್‍‌ಗಳು!
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಹಾಗೂ ನಿಕಟವರ್ತಿ ಪ್ರದೇಶಗಳನ್ನು ಅಗತ್ಯವೆಂದಾದರೆ ಸ್ಫೋಟಿಸಲು ಉಗ್ರರು 600 ಮಾನವಬಾಂಬ್‌(ಆತ್ಮಾಹುತಿದಳ)ಗಳನ್ನು ಆಯಕಟ್ಟಿನ ಜಾಗಗಳಲ್ಲಿ ನೆಲೆಗೊಳಿಸಿದ್ದಾರೆಂಬ ಮಾಹಿತಿಯಂತೆ ಅಲ್ಲಿನ ಸರ್ಕಾರ ಕಟ್ಟೆಚ್ಚರ ವಹಿಸಿದೆ.

ಮಾನವ ಬಾಂಬರ್‌ಗಳನ್ನು ಉಗ್ರರು ಇಸ್ಲಾಮಾಬಾದ್‌ನ ಮದ್ರಸಗಳು ಹಾಗೂ ವಿವಿಧ ಮಸೀದಿಗಳಲ್ಲಿ ಅವಿತಿರಿಸಿಕೊಂಡಿದ್ದಾರೆ. ಇಂತಹ ಮಾನ ಬಾಂಬ್‌ಗಳಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದು, ಲಾಲ್ ಮಸೀದಿ ಪ್ರಕರಣದ ಬಳಿಕ ನಿಗೂಢ ಕಣ್ಮರೆಯಾದವರಾಗಿದ್ದಾರೆ.

ಮುಷರಫ್‌ ಸರ್ಕಾರದ ಸೇನೆಗೆ ಶರಣಾಗಿರುವ ಉಗ್ರವಾದಿ ಇಸ್ಲಾಂಧರ್ಮಗುರು ಅಬ್ದುಲ್ ಅಜೀಜ್ ಬಾಂಬರ್ಗಳ ಮಾಹಿತಿ ನೀಡಿದ್ದಾನೆ. 600ರ ಸಂಖ್ಯೆಯಲ್ಲಿರುವ ಇವರ ಮನಃಪರಿವರ್ತನೆ ಮಾಡಿ, ಪ್ರಾಣಾರ್ಪಣೆಗಾಗಿ ಸಿದ್ಧಗೊಳಿಸಲಾಗಿದ್ದು, ಅವರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ, ಸಂವಹನಸಲಕರಣೆಗಳನ್ನೂ ಒದಗಿಸಲಾಗಿದೆ ಎಂದಿದ್ದಾನೆ.

ಲಾಲ್‌ಮಸೀದಿಯಲ್ಲಿ ವಾರದ ಹಿಂದೆ ಸಂಭವಿಸಿದ ಸರ್ಕಾರಿ ಕಾರ್ಯಾಚರಣೆಯ ವೇಳೆ, ಸೇನೆ ಅಂತಿಮವಾಗಿ ಕಮಾಂಡೋಗಳನ್ನು ಒಳನುಗ್ಗಿಸುವುದಕ್ಕೆ ಕೆಲಸಮಯದ ಮೊದಲು ಮದ್ರಸಾ ತ್ಯಜಿಸಿ ಹೊಸ ಅಡಗುದಾಣಗಳಿಗೆ ತೆರಳಿರುವುದಾಗಿ ಆತ ಹೇಳಿದ್ದಾನೆ.

ಇಂತಹ ಅತ್ಮಾಹುತು ಮಾನವಬಾಂಬ್‌ಗಳಲ್ಲಿ ಒಬ್ಬ ಕಳೆದ ಶುಕ್ರವಾರ ಪೊಲೀಸ್‌ತಂಡದ ಮಧ್ಯೆ ಸ್ವತಃ ಸ್ಫೋಟಗೊಂಡ ಕಾರಣ 8 ಮಂದಿ ಪೊಲೀಸರೂ ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದರು. ಪ್ರಕರಣದಲ್ಲಿ 60 ಮಂದಿ ಗಾಯಗೊಂಡಿದ್ದರು.
ಮತ್ತಷ್ಟು
ವಲಸೆ ಕಾರ್ಮಿಕರಿಗೆ ಉಗ್ರರ ಎಚ್ಚರಿಕೆ
ಅಮರನಾಥ:26,000ಯಾತ್ರಿಕರು
ಗೋವಾ:ಅನರ್ಹತೆಗಾಗಿ ರಾಜಕೀಯ ಸಮರ
ಬೆಂಗಳೂರಿಗೆ ಬಂದ ಹನೀಫ್
ಪೊಲೀಸ್ ಗೋಲಿಬಾರ್; ಆಂಧ್ರ ಬಂದ್‌ಗೆ ಕರೆ
ಅಪ್ಝಲ್ ದಯಾಭಿಕ್ಷೆಪತ್ರ ಲಭಿಸಿಲ್ಲ-ಕಲಾಂ