ಸಿಖ್ ವಿಭಾಗವಾದ ದೇರಾ ಸಚ್ಚಾಸೌಧದ ಮುಖ್ಯಸ್ಥ ಬಾಬಾ ಗುರ್ಮೀಟ್ ಸಿಂಗ್ ರಾಮ್ ರಹೀಂ ವಿರುದ್ಧ ಹತ್ಯೆ ಹಾಗೂ ಅತ್ಯಾಚಾರ ಆರೋಪಕ್ಕಾಗಿ ಸಿಬಿಐ ಸಿದ್ಧ ಪಡಿಸಿರುವ ಆರೋಪ ಪಟ್ಟಿ ಇಂದು ನ್ಯಾಯಾಲಯಕ್ಕೆಸಲ್ಲಿಸುವ ನಿರೀಕ್ಷೆ ಇದೆ.
ಬಾಬಾ ತನ್ನ ಸಹವರ್ತಿ ಸಾಧುವನ್ನು ಕೊಲೆ ಗೈದಿರುವುದು ಹಾಗೂ ಸಾಧ್ವಿಯೊಬ್ಬರನ್ನು ಅತ್ಯಾಚಾರ ಗೈದಿರುವರೆಂಬ ದೂರಿನ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸಿತ್ತು. ಪ್ರಕರಣ 2002ರಲ್ಲಿ ಸಂಭವಿಸಿತ್ತೆನ್ನಲಾಗಿದೆ.
ದೇರಾ ಗುರುವು ಸಿಖ್ರ 10ನೇ ಗುರು ಗುರುಗೋಬಿಂದ್ಸಿಂಗ್ರನ್ನು ಹೋಲುವ ರೀತಿಯಲ್ಲಿ ಉಡುಪು ತೊಟ್ಟು ಪತ್ರಿಕಾ ಪ್ರಕಟ ಣೆ ನೀಡಿರುವುದರಿಂದ ಇತ್ತೀಚೆಗೆ ಪಂಜಾಬ್ನಲ್ಲಿ ಯಾದವೀ ಕಲಹ ಸಂಭವಿಸಿದ ಆರೋಪವೂ ಇದೆ.
ಪ್ರಕರಣದಲ್ಲಿ ಸಿಖ್ಸಮುದಾಯದ ಓರ್ವ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು. ಆದರೆ ಇದೀಗ ದೇರಾ ಕಾರ್ಯಾಲಯ ಹೇಳುವಂತೆ ಪ್ರಕಟಣೆಯ ಕುರಿತು ತಮಗೇನೂ ಗೊತ್ತಿಲ್ಲ ಎಂದಿದ್ದಾರೆ.
|