ಸಹವರ್ತಿ ಯೂಸುಫ್ಗೆ 5ವರ್ಷ ಕಠಿಣ ಸಜೆ ಮುಂಬೈ ಸರಣಿಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಮುಕ್ತಾಯಗೊಳಿಸಿದ ವಿಶೇಷ ಟಾಡಾ ನ್ಯಾಯಾಲಯವು ಅತಿಕುತೂಹಲಿತ ಪ್ರಕರಣದಲ್ಲಿ ಬಾಲಿವುಡ್ ನಟ ಸಂಜಯ್ದತ್ಗೆ 6 ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ವಿಧಿಸಿ ಇಂದು ತೀರ್ಪಿತ್ತಿದೆ.
ಅಕ್ರಮ ಆಯುಧ ಹೊಂದಿದ ಆರೋಪದನ್ವಯ ಸಂಜಯ್ದತ್ಗೆ ಶಿಕ್ಷೆ ವಿಧಿಸಲಾಗಿದ್ದು, ಬಾಲಿವುಡ್ನ ಜನಪ್ರಿಯ ನಟನ ಕುರಿತಾದ ಪ್ರಕರಣದ ತೀರ್ಪಿಗಾಗಿ ಇಡೀ ದೇಶವೇ ಕಿವಿಯಾಲಿಸಿ ಕುಳಿತಿತ್ತು.
ತನ್ಮಧ್ಯೆ, ಸಂಜಯ್ದತ್ ಸಹವರ್ತಿ ಹಾಗೂ ಆಯುಧ ಸಲಕರಣೆಗಳ ಮಾರಾಟಗಾರ ರುಸಿ ಮುಲ್ಲಾನನ್ನು ಅಕ್ರಮ ಆಯುಧವ್ಯವಹಾರ ಕಾಯ್ದೆಯಡಿ ದಂಡ ಸಹಿತ ಬಿಡುಗಡೆ ಮಾಡಲಾಗಿದೆ. ಈತನಿಗೆ 1 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಇದೇ ಕೃತ್ಯದ ಇನ್ನೋರ್ವ ಸಹವರ್ತಿ ಯೂಸುಫ್ ನಲ್ವಾಲಿಯಾಗೆ 5 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ವಿಧಿಸಲಾಗಿದೆ.
ತೀರ್ಪಿನ ಆದೇಶವನ್ನು ಓದಿ ಹೇಳಿದ ನ್ಯಾಯಾಧೀಶ ಪಿ ಡಿ ಕೋಡೆ ಅವರು ಸಂಜಯ್ದತ್ ಅವರ ಮೇಲೆ ದೇಶದೆಲ್ಲೆಡೆ ಅನುಕಂಪ ವ್ಯಕ್ತವಾಗಿರಬಹುದು, ಆದರೆ ದೇಶದ ಕಾಯ್ದೆಯನ್ನು ಅನ್ವಯಿಸುವುದರತ್ ಪ್ರಥಮ ಆದ್ಯತೆ. ಅಲ್ಲದೆ ಸಂಜಯ್ ಅಮಾಯಕ ಸಹವರ್ತಿಗಳನ್ನು ದುರ್ಬಳಕೆ ಮಾಡಿದ ಗುರುತರ ಆರೋಪವನ್ನೂ ಎದುರಿಸಿದ್ದಾರೆ ಎಂದರು.
ಸಂಜಯ್ದತ್ ತನ್ನ ವಶ ಅಕ್ರಮ ದಾಸ್ತಾನಿರಿಸಿದ್ದ ಎ.ಕೆ.56 ಅತ್ಯಾಧುನಿಕ ರೈಫಲ್ನ್ನು ನಾಶಪಡಿಸಲು ಮುಲ್ಲಾನ ನೆರವು ಪಡೆದಿದ್ದನೆಂದು ನ್ಯಾಯಾಲಯ ಆರೋಪಿಸಿದೆ. ಅಲ್ಲದೆ ಎ.ಕೆ.47 ಬಂದೂಕು ಹೊಂದಿದ ದೂರು ಕೂಡ ವಿಚಾರಣೆಗೊಳಪಡಿಸಲಾಗಿದೆ.
|