ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಗಾಂಧೀಜಿ ಹಸ್ತಪ್ರತಿ ಖರೀದಿಸಿದ ಭಾರತ
ಹಸ್ತಪ್ರತಿಯ ಹರಾಜುಬೆಲೆ 18500 ಪೌಂಡುಗಳು!
ಭಾರತದ ರಾಷ್ಟ್ರಪಿತ ಮಹಾತ್ಮಾ ಮೋಹನದಾಸ ಕರಮಚಂದ್ ಗಾಂಧಿ ಅವರ ಕೊನೆಯ ದಿನಗಳಲ್ಲಿ ಬರೆದದ್ದೆನ್ನಲಾದ ಅಮೂಲ್ಯ ಹಸ್ತಪ್ರತಿಯನ್ನು ಲಂಡನ್‌‌ ಸಂಸ್ಥೆಯಿಂದ ಭಾರತ ಸರ್ಕಾರ ಹರಾಜು-ಖರೀದಿ ನಡೆಸಿದೆ.

ಮಹಾತ್ಮಾಗಾಂಧಿಯವರು ಹುತಾತ್ಮರಾದ 1948ರ ಕೊನೆಯದಿನಗಳಿಗೆ ಕೆಲಸಮಯದ ಮೊದಲಷ್ಟೇ ಬರೆದದ್ದೆನ್ನಲಾದ ಅವರ ಹಸ್ತಲಿಖಿತ ಪ್ರತಿಗಳನ್ನು 18000 ಪೌಂಡ್ ಮೊತ್ತ ಹಾಗೂ 3500 ಪೌಂಡ್‌ಗಳ ಹರಾಜು ಶುಲ್ಕಗಳನ್ನು ನೀಡಿ ಭಾರತ ಸರ್ಕಾರ ಖರೀದಿಸಿದೆ.

ಪ್ರಸ್ತುತ ಮುಖ್ಯ ಹಸ್ತ ಪ್ರತಿಯೊಂದಿಗೆ ಭಾರತ ಸರ್ಕಾರವು ಇನ್ನೊಂದು ಹಸ್ತಲಿಖಿತ ಪತ್ರವನ್ನೂ ತನ್ನದಾಗಿಸಿಕೊಂಡಿದೆ. ಪ್ರಧಾನ ಹಸ್ತಪ್ರತಿಯು 9 ಪುಟಗಳಲ್ಲಿದೆ. ಇನ್ನೊಂದನ್ನು ಗುಜರಾತಿ ಗೆಳೆಯನಿಗಾಗಿ ಮಹಾತ್ಮಾ ಬರೆದಿದ್ದರು.

ಗಾಂಧೀಜಿಯವರ ಎಲ್ಲಾ ಕೃತಿಗಳ ಕೃತಿಸ್ವಾಮ್ಯ ಹಕ್ಕನ್ನು ಅಹ್ಮದಾ ಬಾದ್ ಮೂಲದ ನವಜೀವನ್ ಟ್ರಸ್ಟ್‌ ಹೊಂದಿದೆ. ಪ್ರಸ್ತುತ ಹಸ್ತಪ್ರತಿಯ ಕೃತಿ ಸ್ವಾಮ್ಯವನ್ನೂ ಇದೇ ಟ್ರಸ್ಟ್ ಹೊಂದಿರುತ್ತದೆ.

ಪ್ರಸ್ತುತ ಮಾಹಿತಿಯನ್ನು ಸಾಂಸ್ಕೃತಿಕ ಸೌಹಾರ್ದತೆಗಾಗಿರುವ ಭಾರತೀಯ ಸಮಿತಿ (ಐಸಿಸಿಐರ್) ಅಧ್ಯಕ್ಷ ಕರಣ್ ಸಿಂಗ್ ತಿಳಿಸಿದ್ದಾರೆ. ಟ್ರಸ್ಟ್ಜಿಜಿತೇಂದ್ರ ದೇಸಾಯಿ, ನೆಹರೂ ಮ್ಯೂಝಿಯಂ ನಿರ್ದೇಶಕಿ ಮೃದುಲಾ ಮುಖರ್ಜಿ ಪಾಲ್ಗೊಂಡಿದ್ದರು.

ಮಹಾತ್ಮಾ ಅವರ ಸ್ಮರಣೆಗಾಗಿರುವ ಪ್ರಸ್ತುತ ಅಮೂಲ್ಯ ಸ್ಮಾರಕವನ್ನು ಪಡೆಯುವಲ್ಲಿ ಭಾರತ ಸರ್ಕಾರ ಯಶಸ್ವಿಯಾಗಿದ್ದು, ಹಸ್ತಪ್ರತಿಯನ್ನು ಇದೀಗ ದೆಹಲಿಯಲ್ಲಿರುವ ನೆಹರೂ ಸ್ಮಾರಕ ಮ್ಯೂಜಿಯಂನಲ್ಲಿ ಕಾಪಿಡಲಾಗಿದೆ.
ಮತ್ತಷ್ಟು
ಓಬಿಸಿ ಕೋಟಾ: ಮುಂದಿನ ವಿಚಾರಣೆ ಆ.27ಕ್ಕೆ
ಸಂಜಯ್‌ದತ್‌ಗೆ 6ವರ್ಷಗಳ ಕಠಿಣ ಸಜೆ
ದೇರಾಗುರುವಿನ ವಿರುದ್ಧ ಆರೋಪಪಟ್ಟಿ ಸಿದ್ಧ
ಆಸ್ಟ್ರೇಲಿಯಾ:ಹನೀಫ್ ಸಹವರ್ತಿ ಅಮಾನತು
ಇಂದು ಸಂಜಯ್‌ದತ್ ಶಿಕ್ಷಾತೀರ್ಪು
ಸ್ವಾತಂತ್ರ್ಯಯೋಧರ ಬೇಡಿಕೆ ಶೀಘ್ರ: ಸೋನಿಯಾ