1998ರ ಕೊಯಮುತ್ತೊರು ಸ್ಫೋಟ ಪ್ರಕರಣ ಒಂಬತ್ತು ವರ್ಷಗಳ ಹಿಂದೆ ಸಂಭವಿಸಿದಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಎಂದು ತನಿಖಾತಂಡ ಗುರುತಿಸಿರುವ ಕೇರಳದ ಪಿಡಿಪಿ ಮುಖಂಡ ಅಬ್ದುಲ್ ನಾಸರ್ ಮದನಿಯ ಮೇಲಿನ ಆರೋಪಗಳ ಕುರಿತಂತೆ ನ್ಯಾಯಾಲಯ ಇಂದು ತೀರ್ಪು ನೀಡಲಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಂದು ಸಂಭವಿಸಿದ 12 ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. 1998 ಫೆ.14ರಂದು ಲೋಕಸಭಾ ಚುನಾವಣಾ ನಿಮಿತ್ತ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿಯವರು ಪಾಲ್ಗೊಳ್ಳು ಬೃಹತ್ ಸಮಾವೇಶದಲ್ಲಿ ಸ್ಫೋಟ ಕೃತ್ಯ ನಡೆಸಲಾಗಿತ್ತು.
ಎಲ್ ಕೆ ಅಡ್ವಾಣಿಯವರನ್ನು ಗುರಿಯಾಗಿರಿಸಿದ ಈ ಸರಣಿ ಸ್ಫೋಟದಲ್ಲಿ ಅದೃಷ್ಟವಶಾತ್ ಅಡ್ವಾಣಿ ಪಾಲ್ಗೊಂಡಿದ್ದರು. ಅವರು ಕೇರಳದ ತಿರುವನಂತಪುರದಿಂದ ಆಗಮಿಸುವ ವಿಮಾನ ವಿಳಂಬವಾದುದರಿಂದ ಅವರು ಸ್ಫೋಟ ದುರಂತದಿಂದ ಪಾರಾಗಿದ್ದರು.
ಪ್ರಸ್ತುತ ಸರಣಿ ಬಾಂಬ್ ಸ್ಫೋಟದಲ್ಲಿ 58 ಮಂದಿ ಸಾವನ್ನಪ್ಪಿದ್ದರಲ್ಲದೆ,200 ಮಂದಿ ಗಂಭೀರ ಗಾಯಗೊಂಡಿದ್ದರು. ಇದೇ ವೇಳೆ ಕೊಯಮತ್ತೂರಿನ ವಿವಿಧೆಡೆ 40 ನಿಮಿಷಗಳ ಅವಧಿಯಲ್ಲಿ 12 ಆಸ್ಫೋಟಗಳು ಸಂಭವಿಸಿದ್ದುವು.
ಕೃತ್ಯದಲ್ಲಿ ನಿಷೇಧಿತ ಮುಸ್ಲಿಂ ಉಗ್ರವಾದಿ ಸಂಘಟನೆ ಅಲ್ ಉಮ್ಮಾ ಕಾರ್ಯಕರ್ತರ ಕೈವಾಡ ಶಂಕಿಸಲಾಗಿತ್ತು. ಕೇರಳ, ಕರ್ನಾಟಕ, ತಮಿಳ್ನಾಡು, ಆಂಧ್ರಪ್ರದೇಶ ರಾಜ್ಯಗಳಿಗೆ ಸೇರಿದ ನೂರರಷ್ಟು ಮಂದಿಯನ್ನು ಸೆರೆಹಿಡಿಯಲಾಯಿತು.
ಪ್ರಕರಣಕ್ಕೆ ಕುರಿತಂತೆ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ(ಪಿಡಿಪಿ) ಎಂಬ ಕೇರಳ ಮೂಲದ ಸಂಘಟನೆಯ ಮುಖಂಡ ಅಬ್ದುಲ್ ನಾಸರ್ ಮದನಿಯ ಶಾಮೀಲಾತಿ ಹಾಗೂ ಶಿಕ್ಷೆಯ ಕುರಿತು ಕೊಯಮುತ್ತೂರು ನ್ಯಾಯಾಲಯ ಇಂದು ತೀರ್ಪು ನೀಡಲಿದೆ. ಕಳೆದ ಏಳುವರ್ಷಗಳಿಂದ ಮದನಿಯನ್ನು ಇಲ್ಲಿನ ಜೈಲಿನಲ್ಲಿರಿಸಲಾಗಿದೆ.
|