ಅಲ್ಉಮ್ಮಾ- 13 ಮಂದಿಗೆ ಶಿಕ್ಷೆ ಕೊಯಮತ್ತೂರಿನಲ್ಲಿ ಒಂಬತ್ತು ವರ್ಷಗಳ ಹಿಂದೆ ಸಂಭವಿಸಿದಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಎಂದು ತನಿಖಾತಂಡ ಗುರುತಿಸಿರುವ ಕೇರಳದ ಪಿಡಿಪಿ ಮುಖಂಡ ಅಬ್ದುಲ್ ನಾಸರ್ ಮದನಿಯನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಪ್ರಕರಣದಲ್ಲಿ ಶಾಮೀಲಾಗಿರುವ ಇತರ 13 ಮಂದಿಗಳನ್ನು ಆರೋಪಿಗಳೆಂದು ಗುರುತಿಸಿರುವ ನ್ಯಾಯಾಲಯವು ಶಿಕ್ಷೆಗಾಗಿ ಅವರ ವಿಚಾರಣೆಯನ್ನು ಬಾಕಿ ಇರಿಸಿದೆ.ಇವರಲ್ಲಿ ಮುಸ್ಲಿಂ ಉಗ್ರವಾದಿ ಸಂಘಟನೆ ಅಲ್‌ಉಮ್ಮ ಸ್ಥಾಪಕ ಎಸ್.ಎ. ಬಾಷಾ ಪ್ರಮುಖ ನಾಗಿದ್ದಾನೆ.
ಸ್ಫೋಟ ಪ್ರಕರಣದ ಬಳಿಕ ಸೆರೆ ಸಿಕ್ಕಿದ್ದ ಮದನಿ ಎಂಟು ವರ್ಷಗಳ ಕಾಲ ಜೈಲಲ್ಲಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ ಜಾಮೀನು ಬಿಡುಗಡೆ ಹೊಂದಲಾಗಿತ್ತು. ಕೇರಳ ಮೂಲದ ಮುಸ್ಲಿಂ ಪ್ರಾಬಲ್ಯದ ಪಿಡಿಪಿ ಸಂಘಟನೆಯ ಮುಖಂಡನಾದ ಮದನಿಯ ಬಿಡುಗಡೆಗಾಗಿ ಅಲ್ಲಿನ ವಿಧಾನ ಮಂಡಳ ಸಕ್ವಾನುಮತದ ಠರಾವು ಮಂಡಿಸಿ ನ್ಯಾಯಾಲದಲ್ಲಿ ವಿನಂತಿ ಸಲ್ಲಿಸಿತ್ತು.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಂದು ಸಂಭವಿಸಿದ 12 ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. 1998 ಫೆ.14ರಂದು ಲೋಕಸಭಾ ಚುನಾವಣಾ ನಿಮಿತ್ತ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿಯವರು ಪಾಲ್ಗೊಳ್ಳು ಬೃಹತ್ ಸಮಾವೇಶದಲ್ಲಿ ಸ್ಫೋಟ ಕೃತ್ಯ ನಡೆಸಲಾಗಿತ್ತು.
ಎಲ್ ಕೆ ಅಡ್ವಾಣಿಯವರನ್ನು ಗುರಿಯಾಗಿರಿಸಿದ ಈ ಸರಣಿ ಸ್ಫೋಟದಲ್ಲಿ ಅದೃಷ್ಟವಶಾತ್ ಅಡ್ವಾಣಿ ಪಾಲ್ಗೊಂಡಿದ್ದರು. ಅವರು ಕೇರಳದ ತಿರುವನಂತಪುರದಿಂದ ಆಗಮಿಸುವ ವಿಮಾನ ವಿಳಂಬವಾದುದರಿಂದ ಅವರು ಸ್ಫೋಟ ದುರಂತದಿಂದ ಪಾರಾಗಿದ್ದರು.
ಪ್ರಸ್ತುತ ಸರಣಿ ಬಾಂಬ್ ಸ್ಫೋಟದಲ್ಲಿ 58 ಮಂದಿ ಸಾವನ್ನಪ್ಪಿದ್ದರಲ್ಲದೆ,200 ಮಂದಿ ಗಂಭೀರ ಗಾಯಗೊಂಡಿದ್ದರು. 140 ದಶಲಕ್ಷ ರೂ. ಮೊತ್ತದ ಆಸ್ತಿಪಾಸ್ತಿ ಹಾನಿಯಾಗಿತ್ತು.ಇದೇ ವೇಳೆ ಕೊಯಮತ್ತೂರಿನ ವಿವಿಧೆಡೆ 40 ನಿಮಿಷಗಳ ಅವಧಿಯಲ್ಲಿ 12 ಆಸ್ಫೋಟಗಳು ಸಂಭವಿಸಿದ್ದುವು.
|