ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮೂರು ರಾಜ್ಯಗಳಲ್ಲಿ ನೆರೆಹಾವಳಿ:15 ಸಾವು
ಅಸ್ಸಾಂ, ಉತ್ತರ ಪ್ರದೇಶ,ಬಿಹಾರ ಇತ್ಯಾದಿ ಮೂರು ರಾಜ್ಯಗಳಲ್ಲಿ ಮಳೆಹಾನಿ ಹಾಗೂ ನೆರೆಹಾವಳಿ ವ್ಯಾಪಕವಾಗಿದ್ದು, ಈ ವರೆಗೆ 15 ಮಂದಿ ಸಾವನ್ನಪ್ಪಿದ್ದಾರೆ.

ಅಸ್ಸಾಂ ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ತುರ್ತು ಸ್ಥಿತಿ ನಿರ್ಮಾಣವಾಗಿದ್ದು, ಮುಖ್ಯಮಂತ್ರಿ ತರುಣ್‌ಗೊಗೋಯಿ ಅವರು ಸಮರೋಪಾದಿಯ ಪರಿಹಾರ ಕ್ರಮಗಳಿಗಾಗಿ ಜಿಲ್ಲಾಡಳಿತಗಳಿಗೆ ವಿನಂತಿಸಿದ್ದಾರೆ.

ಸಂತ್ರಸ್ತ ಪ್ರದೇಶಗಳ ವೈಮಾನಿಕ ಸಮೀಕ್ಷೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ಸಂತ್ರಸ್ತ ಜನತೆಯ ನೆರವಿಗಾಗಿ ಸೇನೆ ಕಾರ್ಯಾಚರಿಸುತ್ತಿದೆ ಎಂದರು.

ಪ್ರಕೃತಿ ವಿಕೋಪದಿಂದಾಗಿ ನೆರೆಹಾವಳಿಯಿಂದ ಆಸ್ತಿಪಾಸ್ತಿ ಕಳಕೊಂಡವರಿಗೆ ಹೆಲಿಕಾಪ್ಟರ್ ಮೂಲಕ ಆಹಾರದ ಪೊಟ್ಟಣ ಒದಗಿಸುವ ಕ್ರಮ ಪ್ರಗತಿಯಲ್ಲಿದೆ. ಆಹಾರದ ದಾಸ್ತಾನು ಸಾಕಷ್ಟಿದೆ ಎಂದು ಗೊಗೋಯಿ ತಿಳಿಸಿದ್ದಾರೆ.

ತನ್ಮಧ್ಯೆ, ರಾಜ್ಯದಲ್ಲಿ ನಿರಂತರ ಪ್ರಕೃತಿ ವಿಕೋಪಕ್ಕೆ ಕಾರಣವೇನು ಎಂಬ ಕುರಿತು ತನಿಖೆಗೆ ಕ್ರಮಕೈಗೊಳ್ಳಲಾಗಿದೆ.
ಮತ್ತಷ್ಟು
ಇಂದಿರಾ ಹತ್ಯಾಘರ್ಷಣೆ:ಹಣಅಪವ್ಯಯಕ್ಕೆ ಕಠಿಣಸಜೆ
ಅಡ್ವಾಣಿ ಹತ್ಯಾಸಂಚು:ಮದನಿ ದೋಷಮುಕ್ತಿ
ಅಡ್ವಾನಿ ಹತ್ಯೆ ಸಂಚು:ಇಂದು ಮದನಿ ತೀರ್ಪು
ಗಾಂಧೀಜಿ ಹಸ್ತಪ್ರತಿ ಖರೀದಿಸಿದ ಭಾರತ
ಓಬಿಸಿ ಕೋಟಾ: ಮುಂದಿನ ವಿಚಾರಣೆ ಆ.27ಕ್ಕೆ
ಸಂಜಯ್‌ದತ್‌ಗೆ 6ವರ್ಷಗಳ ಕಠಿಣ ಸಜೆ