ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಆಯೋಧ್ಯಾಗಲಭೆ:ವಿವರಣೆ ಕೇಳಿದ ಸು.ಕೋರ್ಟ್
ಬಾಬರಿ ಮಸೀದಿ ಧ್ವಂಸ 1992ರ( ಅಯೋಧ್ಯಾ ವಿವಾದ)ಪ್ರಕರಣಕ್ಕೆ ಸಂಬಂಧಿಸಿ ಮುಂಬೈಯಲ್ಲಿ ಸಂಭವಿಸಿದ ಕೋಮುಗಲಭೆ ಸಾವುನೋವುಗಳಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಲು ಅಂದಿನ ಮಹಾರಾಷ್ಟ್ರ ಸರ್ಕಾರ ವಿಫಲವಾದುದೇಕೆ ಎಂದು ಸುಪ್ರೀಂಕೋರ್ಟ್ ವಿವರಣೆ ಕೇಳಿದೆ.

ಪ್ರಸ್ತುತ ಕೋಮು ಗಲಭೆಗೆ ಕಾರಣಕರ್ತರಾದವರ ವಿರುದ್ಧ ಕಠಿಣ ಕಾನೂನಕ್ರಮ ಜರುಗಿಸಲು ಅಂದಿನ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದಾವೆಅರ್ಜಿ ದಾಖಲಿಸಿದವರಿಗೆ ನ್ಯಾಯಾಲಯ ವರದಿ ನೀಡಲು ಸೂಚನೆ ನೀಡಿದೆ.

ಪ್ರಸ್ತುತ ಕೋಮು ಗಲಭೆಯ ಕುರಿತು ತನಿಖೆ ನಡೆಸಲು ಸರ್ಕಾರ ನೇಮಿಸಿದ್ದ ಶ್ರೀಕೃಷ್ಣ ಆಯೋಗ ವರದಿ ಸಲ್ಲಿಸಿದ್ದು, ಶಿಫಾರಸುಗಳನ್ನು ಜಾರಿಗೊಳಿಸಬೇಕೆಂದು ಈ ಕುರಿತು ರಚನೆಯಾದ ಕ್ರಿಯಾ ಸಮಿತಿ ಸರ್ವೋಚ್ಛನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿತ್ತು.

ಪ್ರಸ್ತುತ ಅರ್ಜಿಯಲ್ಲಿನ ಪ್ರಮುಖ ಆರೋಪವೆಂದರೆ, 1992ರ (ವಿವಾದಗ್ರಸ್ತ ಬಾಬರಿ ಮಸೀದಿ ಧ್ವಂಸ ಪ್ರಕರಣ) ಕೋಮು ಗಲಭೆಗೆ ಕಾರಣರಾದವರನ್ನು ಅಂದಿನ ಮಹಾರಾಷ್ಟ್ರ ಸರ್ಕಾರ ಉದ್ದೇಶ ಪೂರ್ವಕ ಕ್ರಮಕೈಗೊಳ್ಳದೇ ಬಿಟ್ಟಿದೆ. ಇದರಿಂದಾಗಿ 1993ರ ಸರಣಿ ಸ್ಫೋಟಕ್ಕೆ ಕಾರಣವಾಯಿತು. ಗಲಭೆ ಆರೋಪಿತರ ವಿರುದ್ಧ ಕ್ರಮಕ್ಕೆ ಆಯೋಗ ಶಿಫಾರಸು ಮಾಡಿದ್ದರೂ ಸರ್ಕಾರ ಮೌನ ಪಾಲಿಸಿತ್ತು ಎಂಬುದಾಗಿದೆ.

ಅರ್ಜಿಯಲ್ಲಿ ಸರ್ಕಾರದ ವೈಫಲ್ಯಗಳ ಮೇಲಿನ ಆರೋಪಗಳ ಕುರಿತು ಅರ್ಜಿದಾರರು ವಿವರ ವರದಿ ನೀಡಬೇಕು, ಇದರಿಂದ ಪ್ರಕರಣದ ನ್ಯಾಯತೀರ್ಮಾನ ಸುಸೂತ್ರವಾಗಲಿದೆ ಎಂಬುದಾಗಿ ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.

ಬಾಬರಿ ಮಸೀದಿ ಧ್ವಂಸ- ಶ್ರೀರಾಮ ಜನ್ಮಭೂಮಿ ವಿವಾದದ ಕೋಮು ಗಲಭೆಯ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸಿರುವ ಶ್ರೀಕೃಷ್ಣ ಆಯೋಗದ ವರದಿಯನ್ನಷ್ಟೇ ಆಧರಿಸಿ ಕ್ರಮ ಕೈಗೊಳ್ಳುವುದು ಅಸಾಧ್ಯ ಎಂದು ತಿಳಿಸಲಾಗಿದೆ.

ಪ್ರಧಾನ ನ್ಯಾ.ಮೂ. ಕೆ.ಜಿ. ಬಾಲಕೃಷ್ಣನ್, ನ್ಯಾ.ಮೂರ್ತಿಗಳಾದ ಆರ್.ವಿ. ರವೀಂದ್ರನ್, ದಲ್ವೀರ್ ಬಂಡಾರಿ ಇವರನ್ನೊಳಗೊಂಡ ತ್ರಿಸದಸ್ಯ ಪೀಠ ಪ್ರಸ್ತುತ ನಿರ್ದೇಶವನ್ನು ನೀಡಿದೆ.
ಮತ್ತಷ್ಟು
ಮೂರು ರಾಜ್ಯಗಳಲ್ಲಿ ನೆರೆಹಾವಳಿ:15 ಸಾವು
ಇಂದಿರಾ ಹತ್ಯಾಘರ್ಷಣೆ:ಹಣಅಪವ್ಯಯಕ್ಕೆ ಕಠಿಣಸಜೆ
ಅಡ್ವಾಣಿ ಹತ್ಯಾಸಂಚು:ಮದನಿ ದೋಷಮುಕ್ತಿ
ಅಡ್ವಾನಿ ಹತ್ಯೆ ಸಂಚು:ಇಂದು ಮದನಿ ತೀರ್ಪು
ಗಾಂಧೀಜಿ ಹಸ್ತಪ್ರತಿ ಖರೀದಿಸಿದ ಭಾರತ
ಓಬಿಸಿ ಕೋಟಾ: ಮುಂದಿನ ವಿಚಾರಣೆ ಆ.27ಕ್ಕೆ