ಮಧ್ಯಪ್ರದೇಶದ ಅಂದಿನ ಸಚಿವ ಪ್ರಕಾಶ್ ಜಾಜೂಗೆ ಜೀವಬೆದರಿಕೆಯೋಡ್ಡಿದ ಪ್ರಕರಣದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ತಂದೆ ಅಶೋಕ್ ಚೋಪ್ರಾ ಇವರನ್ನು ನ್ಯಾಯಾಲಯ ದೋಷಮುಕ್ತಿಗೊಳಿಸಿದೆ.
ಮಧ್ಯಪ್ರದೇಶದ ಉಚ್ಛನ್ಯಾಯಾಲಯದ ಇಂದೋರ್‌ನ ಪೀಠವು ಪ್ರಸ್ತುತ ತೀರ್ಪು ನೀಡಿದೆ. ವರ್ಷಗಳ ಹಿಂದಿನ ಈ ಪ್ರಕರಣದಲ್ಲಿ ಬಾಲಿವುಡ್ ತಾರೆ ಹಾಗೂ ತಂದೆ ಇಬ್ಬರನ್ನೂ ಆರೋಪಿಗಳನ್ನಾಗಿಸಿ ಸಚಿವ ಪ್ರಕಾಶ್ ಜಾಜೂ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ಪ್ರಸ್ತುತ ಪ್ರಕರಣದಲ್ಲಿ ಅಧೀನ ನ್ಯಾಯಾಲಯವು ತಂದೆ ಹಾಗೂ ಮಗಳಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರಿಯಾಂಕ ರಾಜ್ಯ ಉಚ್ಛನ್ಯಾಯಾಲಯದ ಮೊರೆಹೊಕ್ಕಿದ್ದರು.
ಪ್ರಕರಣವನ್ನು ವಿಚಾರಿಸಿದ ನ್ಯಾಯಾಧೀಶ ಎಸ್ ಸಿ ವ್ಯಾಸ್ ಅವರು ಪ್ರಿಯಾಂಕಾ ಚೋಪ್ರಾ ಹಾಗೂ ಇವರ ತಂದೆಯ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ದೋಷಮುಕ್ತಿಗೊಳಿಸಿದ್ದಾರೆ.
|