ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಗ್ಲಾಸ್ಗೊಸ್ಫೋಟ ಆರೋಪಿ ಕಫೀಲ್ ಸಾವು
ಗ್ಲಾಸ್ಗೊ ವಿಫಲ ಸ್ಫೋಟಸಂಚಿನ ಸಂಶಯಿತ ಪ್ರಮುಖ ಆರೋಪಿ ಗಂಭೀರ ಸುಟ್ಟಗಾಯಗಳೊಂದಿಗೆ ಬ್ರಿಟನ್‌ ಆಸ್ಪತ್ರೆಯಲ್ಲಿದ್ದ ಭಾರತೀಯ ಕಫೀಲ್ ಅಹ್ಮದ್ ಮೃತಪಟ್ಟಿದ್ದಾನೆ.

ಜೂನ್ 30ರಂದು ಸಂಭವಿಸಿದ ಬ್ರಿಟನ್‌ನ ಗ್ಲಾಸ್ಗೊ ವಿಮಾನ ನಿಲ್ದಾಣ ಸ್ಫೋಟದ ವಿಫಲ ಪ್ರಕರಣ ಸಂಭವಿಸಿತ್ತು. ಕೃತ್ಯದಲ್ಲಿ ಶಂಕಿತ ಭಯೋತ್ಪಾದಕ ಕಫೀಲ್ ಅಹ್ಮದ್‌ ಬೆಂಕಿ ಭುಗಿಲೇಳುವ ವಾಹನವನ್ನು ವಿಮಾನನಿಲ್ದಾಣ ಸಂಕೀರ್ಣಕ್ಕೆ ನುಗ್ಗಿಸಿ ಸ್ಫೋಟಗೊಳಿಸಲು ಪ್ರಯತ್ನಿಸಿದ್ದನು.

ಕೃತ್ಯದ ವೇಳೆ ದೇಹದ ಪೂರ್ಣಪ್ರಮಾಣದಲ್ಲಿ ಸುಟ್ಟಗಾಯಗಳಿಂದ ಜರ್ಜರಿತನಾಗಿದ್ದ ಕಫೀಲ್‌ನನ್ನು ಸೆರೆಹಿಡಿದ ಬ್ರಿಟನ್ ಪೊಲೀಸರು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು.

ಬೆಂಗಳೂರು ಮೂಲದವನಾದ ಕಫೀಲ್(27) ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು 90 ಶೇಕಡ ಸುಟ್ಟಗಾಯಗಳೊಂದಿಗೆ ಕೊಮಾ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಇದುವರೆಗೆ ಜೀವನ್ಮರಣ ಹೋರಾಟ ನಡೆಸುತ್ತಿದ್ದನು.

ಕಫೀಲ್‌ನ ಸಾವು ಗ್ಲಾಸ್ಗೊ ಸ್ಫೋಟ ವಿಫಲ ಸಂಚಿನ ತನಿಖೆಯ ಪ್ರಗತಿಗೆ ಅಡಚಣೆಯಾಗಿದೆ. ಈತ ಪ್ರಸ್ತುತ ಪ್ರಕರಣದ ಏಕೈಕ ಪ್ರಮುಖ ಸಾಕ್ಷಿಯಾಗಿದ್ದನು.

ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದವನಾದ ಈತನ ಸಂಬಂಧಿಕರಾದ ಸಬೀಲ್ ಅಹ್ಮದ್, ಮಹಮ್ಮದ್ ಹನೀಫ್ ಎಂಬವರನ್ನು ವಿಚಾರಣೆಗೊಳಪಡಿಸಲಾಗಿತ್ತು.

ಆದರೆ ಮಹಮ್ಮದ್ ಹನೀಫ್‌ರನ್ನು ವಿಚಾರಣೆ ಮುಕ್ತಗೊಳಿಸಿ , ವೈದ್ಯನೌಕರಿ ಮೊಟಕುಗೊಳಿಸಿ ಆಸ್ಟ್ರೇಲಿಯದಿಂದ ಭಾರತಕ್ಕೆ ಕಳುಹಿಸಲಾಗಿತ್ತು.
ಮತ್ತಷ್ಟು
ಸಂಜಯ್‌ದತ್‌ ಯರವಾಡ ಜೈಲಿಗೆ
ಪ್ರಿಯಾಂಕಾ ಚೋಪ್ರ ದೋಷಮುಕ್ತಿ
ಅಡ್ವಾಣಿ ಹತ್ಯಾಸಂಚು:ಆ.6 ತೀರ್ಪು ನಿರೀಕ್ಷೆ
ಆಯೋಧ್ಯಾಗಲಭೆ:ವಿವರಣೆ ಕೇಳಿದ ಸು.ಕೋರ್ಟ್
ಮೂರು ರಾಜ್ಯಗಳಲ್ಲಿ ನೆರೆಹಾವಳಿ:15 ಸಾವು
ಇಂದಿರಾ ಹತ್ಯಾಘರ್ಷಣೆ:ಹಣಅಪವ್ಯಯಕ್ಕೆ ಕಠಿಣಸಜೆ