ಮಾಡೆಲ್ ಜೆಸ್ಸಿಕಾ ಲಾಲ್ ಹತ್ಯಾಪ್ರಕರಣದಲ್ಲಿ ದೆಹಲಿ ಪೊಲೀಸರ ಮೇಲಿನ ಆರೋಪಗಳ ವಿಚಾರಣೆಯನ್ನು ಇಂದು ರಾಜ್ಯ ಹೈಕೋರ್ಟ್ ಮುಕ್ತಾಯಗೊಳಿಸಿದೆ.
ಜೆಸ್ಸಿಕಾ ಲಾಲ್ ಹತ್ಯಾ ಪ್ರಕರಣದ ತನಿಖೆ ನಡೆಸಿದ ಪೊಲೀಸರ ಕ್ರಮದಲ್ಲಿ ಕರ್ತವ್ಯ ಲೋಪವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲಾಗಿತ್ತು, ಅದನ್ನೀಗ ಕೈ ಬಿಟ್ಟಿರುವುದರಿಂದ ಅಧಿಕಾರಿಗಳು ನಿರಾಳವಾಗಿದ್ದಾರೆ.
ನ್ಯಾಯಮೀರ್ತಿಗಳಾದ ಆರ್.ಎಸ್. ಸೋದಿ ಹಾಗೂ ಪಿ.ಕೆ.ಭಾಸಿನ್ ಇವರನ್ನೊಳಗೊಂಡು ವಿಭಾಗೀಯ ಪೀಠವು ವಿಚಾರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಆರೋಪದಲ್ಲಿ ತಿಳಿಸಲಾಗಿರುವಂತೆ ಹತ್ಯಾ ಪ್ರಕರಣದ ತನಿಖೆ ನಡೆಸಿದ ದೆಹಲಿ ಪೊಲೀಸರ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ( ಎಸ್‌ಐಟಿ)ವನ್ನು ನೇಮಿಸಲಾಗಿತ್ತಲ್ಲದೆ, ವಿಭಾಗೀಯ ಪೀಠಕ್ಕೆ ಈ ತಂಡಸಲ್ಲಿಸದ ವರದಿಯನ್ನಾಧರಿಸಿ ಕಲಾಪ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ರಾಂಪ್ ಮಾಡೆಲ್ ಜೆಸ್ಸಿಕಾ ಲಾಲ್ ಹತ್ಯೆ 1999ರಲ್ಲಿ ಸಂಭವಿಸಿದ್ದು, ಮಾಜಿ ಕೇಂದ್ರ ಸಚಿವ ವಿನೋದ್ ಶರ್ಮರ ಪುತ್ರ ಮನು ಶರ್ಮ ಪ್ರಮುಖ ಆರೋಪಿ.ಯಾಗಿದ್ದರಲ್ಲದೆ, ಬಳಿಕ ಬಿಡುಗಡೆ ಹೊಂದಲಾಗಿತ್ತು.
ದೆಹಲಿ ಹೊರವಲಯದ ರೆಸ್ಟುರಾದಲ್ಲಿ ಅಂದು ಜರುಗಿದ ಔತಣಕೂಟದಲ್ಲಿ ಮದ್ಯ ವಿತರಿಸಲು ನಿರಾಕರಿಸಿದುದಕ್ಕಾಗಿ ಜೆಸ್ಸಿಕಾ ಹತ್ಯೆ ನಡೆಯಿತು ಎಂಬುದು ಪೊಲೀಸರಲ್ಲಿ ದಾಖಲೆ ತಿಳಿಸುತ್ತದೆ.
|