ಕೊಯಮತ್ತೂರಿನಲ್ಲಿ ಸಂಭವಿಸಿದ 1998ರ ಸರಣಿ ಬಾಂಬ್ ಸ್ಫೋಟದ ಆರೋಪಿಗಳಾದ ಶಂಕಿತರು ಇಂದು ಜಾಮೀನು ಬಿಡುಗಡೆ ಕೋರಿ ಅರ್ಜಿ ದಾಖಲಿಸಿದ್ದಾರೆ.
ಆಗಸ್ಟ್1ರಂದು ಕೊಯಮತ್ತೂರು ನ್ಯಾಯಾಲಯ ನೀಡಿದ ಆದೇಶದಂತೆ ಈ ಆರೋಪಿಗಳನ್ನು ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಗುರುತಿಸಲಾಗಿತ್ತು. ಆದರೆ ಪ್ರಮುಖ ಆರೋಪಿಯೆಂದು ಸಂಶಯಿಸಿದ ಅಬ್ದುಲ್ ನಾಸರ್ ಮದನಿಯನ್ನು ನಿರ್ದೋಷಿ ಎಂದು ಘೋಷಿಸಲಾಗಿತ್ತು.
ಸ್ಫೋಟ ಪ್ರಕರಣದಲ್ಲಿ ಆರೋಪಿಗಳಾದ 169 ಮಂದಿಯಲ್ಲಿ ಅಲ್‌ಉಮ್ಮಾ ಸಂಘಟನೆಯ ಸ್ಥಾಪಕನಾದ ಬಾಷಾಸೇರಿದಂತೆ 69 ಮಂದಿಯನ್ನಷ್ಟೇ ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿತ್ತು. ಇತರರಿಗೆ ಜಾಮೀನು ಅರ್ಜಿ ಸಲ್ಲಿಸಬಹುದು ತಿಳಿಸಲಾಗಿತ್ತು. ಈ ಎಲ್ಲಾ ಆರೋಪಿಗಳೂ ಜಾಮೀನು ಕೋರಿ ಇಂದು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ.
ಈ ನಿಮಿತ್ತ 84 ಮಂದಿ ಆರೋಪಿಗಳು ಇಂದು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ವಿಚಾರಣೆಯು ಆಗಸ್ಟ್4ರಂದು ವಿಚಾರಣೆ ನಡೆಯಲಿದೆ.
|