ಮುಂಬೈ ಮಹಾನಗರ ಹಾಗೂ ಹೊರವಲಯದಲ್ಲಿ ಸುರಿಯುತ್ತಿರುವ ಮುಸಲಧಾರೆ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ಇದು ಈ ಹಂಗಾಮಿನಲ್ಲಿ ಎರಡನೇ ಬಾರಿಯಾಗಿದೆ.
ಕಳೆದ ಕೆಲದಿನಗಳಿಂದ ಸಾಮಾನ್ಯ ಸ್ಥಿತಿಯಲ್ಲಿರುವ ಮಳೆ ಇದೀಗ ಪ್ರಬಲವಾಗಿದ್ದು, ರೈಲು ಮಾರ್ಗ, ರಸ್ತೆಸಂಚಾರ ಅಡಚಣೆಯಾಗಿದೆ. ಇದು ನಿತ್ಯಪ್ರಯಾಣಿಕರು, ನೌಕರಸ್ಥರಿಗೆ ಅನಾನುಕೂಲತೆ ನಿರ್ಮಿಸಿದೆ.
ಮಳೆಯಿಂದಾಗಿ ಕುರ್ಲಾ ಹಾಗೂ ಸಿಯಾನ್ ರೈಲು ನಿಲ್ದಾಣ ಪ್ರದೇಶದಲ್ಲಿ ಹಳಿಯಲ್ಲಿ ಸೇರಿರುವ ನೀರಿನ ಮಟ್ಟ ಏರುತ್ತಿದೆ. ಇದೊಂದು ಪ್ರತಿ ಹಂಗಾಮಿನಲ್ಲಿ ಸಮಸ್ಯೆಯಾಗಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೆರೆ ಹಾವಳಿಯಿಂದಾಗಿ ಪಶ್ಚಿಮ ವಿಭಾಗದಲ್ಲಿ ಸಂಚರಿಸುವ ರೈಲುಗಾಡಿಗಳನ್ನು 10ರಿಂದ 15 ನಿಮಿಷ ತಡವಾಗಿ ಸಂಚರಿಸಲು ಬಿಡಲಾಗಿದೆ.
|