ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಿಂಗ್‌, ಸೋನಿಯಾ-ಕ್ರಿಮಿನಲ್ ದೂರು
ರಾಷ್ಟ್ರಪತಿ ಆಯ್ಕೆ ಚುನಾವಣೆ ವೇಳೆ ಮತದಾರರನ್ನು ಖುಷಿಪಡಿಸಲು ಔತಣಕೂಟ ಏರ್ಪಡಿಸಿದರೆಂಬ ಆರೋಪದನ್ವಯ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ವಿರುದ್ಧ ಕಾನೂನು ಸಮರ ಆರಂಭವಾಗಿದೆ.

ದೆಹಲಿ ಉಚ್ಚ ನ್ಯಾಯಾಲಯವು ಈ ಕುರಿತು ರಾಜ್ಯ ಸರ್ಕಾರಕ್ಕೆ ನೊಟೀಸ್‌ ಜಾರಿಗೊಳಿಸಿ, ಪ್ರಧಾನಿ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾರ ವಿರುದ್ಧ ಫಿರ್ಯಾಧಿಯೊಬ್ಬರ ದೂರಿನಂತೆ ಕ್ರಿಮಿನಲ್ ಮೊಕದ್ದಮೆ ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದೆ.

ಮತದಾರರನ್ನು ಆಕರ್ಷಿಸಲು ಔತಣಕೂಟ ಏರ್ಪಡಿಸಿದ ಸಿಂಗ್ ಹಾಗೂ ಸೋನಿಯಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯದ ತನಿಖಾ ಸಂಸ್ಥೆಗಳು ನಿರಾಕರಿಸಿದ್ದವು. ಇದನ್ನು ಹೈಕೋರ್ಟ್ ಪ್ರಶ್ನಿಸಿದೆ.

ಇತ್ತೀಚೆಗೆ ಜರುಗಿದ ರಾಷ್ಟ್ರಪತಿ ಆಯ್ಕೆಯ ವೇಳೆ ಯುಪಿಎ ಅಭ್ಯರ್ಥಿಯ ಗೆಲುವಿಗಾಗಿ , ಸೋನಿಯಾ ಹಾಗೂ ಸಿಂಗ್ ದೆಹಲಿಯ ಪಂಚತಾರಾ ಹೊಟೇಲ್‌ನಲ್ಲಿ ಮತದಾರರಾದ ಶಾಸಕರು ಸಂಸದರಿಗೆ ಔತಣಕೂಟ ಏರ್ಪಡಿಸಿದ್ದರು ಎಂಬುದು ಆರೋಪ.

ಈ ಪ್ರಕರಣವನ್ನು ಉಲ್ಲೇಖಿಸಿ ಇವರಿಬ್ಬರ ವಿರುದ್ಧ ಕಾನೂನುಕ್ರಮ ಆಗ್ರಹಿಸಿ ವಕೀಲರಾದ ರವೀಂದ್ರ ಕುಮಾರ್ ಅವರು ದೆಹಲಿ ಮ್ಯಾಜಿಸ್ಟ್ರೇಟ್ ಬಳಿ ಮೊಕದ್ದಮೆ ಹೂಡಿದ್ದರೂ ಸೂಕ್ತ ಕ್ರಮ ಜರುಗಿಸಿರಲಿಲ್ಲ.

ಈ ಕಾರಣದಿಂದ ದೆಹಲಿ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರಂತೆ ರಾಜ್ಯ ಸೊಲಿಸಿಟರ್ ಜನರಲ್ ಪಿ ಪಿ ಮಲ್ಹೊತ್ರ ಅವರನ್ನೂ ತರಾಟೆಗೆ ತೆಗೆದುಕೊಳ್ಳಲಾಗಿದೆ.
ಮತ್ತಷ್ಟು
ತೀರ್ಪುಗಳ ಗದ್ದಲ:ಮಸುಕಾದ ಚುನಾವಣೆ
ಮುಂಬೈಮಳೆ: ಜನಜೀವನ ಅಸ್ತವ್ಯಸ್ತ
ಸ್ಫೋಟ:84 ಮಂದಿಯಿಂದ ಜಾಮೀನು ಅರ್ಜಿ
ಜೆಸ್ಸಿಕಾಪ್ರಕರಣ: ಕಲಾಪ ಸ್ಥಗಿತ
ಗ್ಲಾಸ್ಗೊಸ್ಫೋಟ ಆರೋಪಿ ಕಫೀಲ್ ಸಾವು
ಸಂಜಯ್‌ದತ್‌ ಯರವಾಡ ಜೈಲಿಗೆ