ನೆರೆಹಾವಳಿಯಿಂದ ಸಂತ್ರಸ್ತರಾದ ಜನರು ಪ್ರವಾಹವನ್ನು ನಿಯಂತ್ರಿಸಲು ರೈಲ್ವೇ ಸೇತುವೆಯನ್ನು ಮುಚ್ಚುವುದನ್ನು ತಡೆದ ಪೊಲೀಸರು ಗೋಲಿಬಾರ್ ನಡೆಸಿದ ವೇಳೆ ಓರ್ವಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.
ಪ್ರಕರಣದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೂಡ ಗಾಯಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಸ್ಥಳೀಯ ಮೂಲಗಳ ಪ್ರಕಾರ ನೆರೆಹಾವಳಿಯಿಂದ ತತ್ತರಿಸಿದ ಜನರ ಮೇಲೆ ಇದೊಂದು ಆಘಾತವಾಗಿ ಪರಿಗಣಿಸಿದೆ.
ನೆರೆಯಿಂದ ತತ್ತರಿಸಿದ ಜನರು ಸ್ಥಳದಲ್ಲೇ ಹಾದುಹೋಗುವ ರೈಲುಮಾರ್ಗದ ಸೇತುವೆಯೊಂದರಿಂದ ವಸತಿ ಪ್ರದೇಶಕ್ಕೆ ನೀರು ನುಗ್ಗುವುದನ್ನು ತಡೆಯಲು ಪ್ರಯತ್ನಿಸಿದ್ದರು.
ಈ ಕೆಲಸವನ್ನು ಜಿಲ್ಲಾಡಳಿತ ಹಾಗೂ ರೈಲ್ವೇ ಅಧಿಕಾರಿಗಳು ವಿರೋಧಿಸಿದರೂ ಜನರು ಪ್ರಯತ್ನದ ಪಟ್ಟು ಬಿಡದೆ, ಪೊಲೀಸ್ ಕಾರ್ಯಾಚರಣೆಯನ್ನೂ ಲೆಕ್ಕಿಸದೇ ಘರ್ಷಣೆಗೆ ಮುಂದಾದರು, ಈ ವೇಳೆ ಗೋಲಿಬಾರ್ ಅನಿವಾರ್ಯವಾಯಿತು ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
|