ಉಗ್ರಗಾಮಿ ಸಂಪರ್ಕ ವಿಚಾರಣೆಯ ಬಳಿಕ ಆಸ್ಟ್ರೇಲಿಯಾದಿಂದ ಮರಳಿರುವ ಬೆಂಗಳೂರಿನ ಡಾ. ಹನೀಫ್ ಕುರಿತಂತೆ ಬಿಜೆಪಿ ಪೂರಕವಾಗಿದ್ದರೆ, ಆರ್‌ಎಸ್‌ಎಸ್ ಸಂಘಪರಿವಾರಗಳು ವಿರೋಧಿಸಿವೆ.
ಡಾ. ಹನೀಫ್‌ಗೆ ಕರ್ನಾಟಕ ಸರ್ಕಾರ ನೌಕರಿ ನೀಡುವುದನ್ನು ಬಿಜೆಪಿ ಸ್ವಾಗತಿಸಿದೆ. ಆದರೆ ಇದುವರೆಗೆ ಸುಮ್ಮನಿದ್ದ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ಹಾಗೂ ಪರಿವಾರ ಸಂಘಟನೆಗಳು ಇದೀಗ ಅಪಸ್ವರ ಎತ್ತಿವೆ.
ಸಂಘಪರಿವಾರಗಳ ಮುಖವಾಣಿಯಾಗಿರುವ 'ಆರ್ಗನೈಸರ್'ನಲ್ಲಿ ವರದಿಮಾಡಿರುವಂತೆ 'ಡಾ. ಹನೀಫ್‌ನ್ನು ಆಸ್ಚ್ರೇಲಿಯದಿಂದ ಹೊರಹಾಕಲಾಗಿದೆ. ಅಲ್ಲದೆ ವಿಸಾವನ್ನು ರದ್ದುಪಡಿಸಲಾಗಿದೆ. ಭಾರತಕ್ಕೆ ತೆರಳಲು ಅವಕಾಶ ನೀಡಿದ್ದರೂ ಗುಪ್ತಚರ ದಳಗಳು ಹನೀಫ್‌ಗೆ ಉಗ್ರ ಸಂಪರ್ಕದ ಮಾಹಿತಿ ಹೊಂದಿವೆ' ಎಂದು ಹೇಳಲಾಗಿದೆ.
ಆಗ್ರನೈಸರ್ ಹೇಳುವಂತೆ ಡಾ. ಹನೀಫ್‌ಗೆ ಉಗ್ರರ ಚಟವಟಿಕೆ ಹಾಗೂ ಅವರ ಸಂಚಿನ ಮಾಹಿತಿ ಇತ್ತು. ಆತ ಇದೆಲ್ಲವನ್ನೂ ಅರಿತಿದ್ದರು ಎಂಬುದಾಗಿ ಹೇಳಲಾಗಿದೆ.
ಆದರೆ ಬಿಜೆಪಿ ಭಿನ್ನ ನಿಲುವು ಹೊಂದಿದೆ. ಡಾ. ಹನೀಫ್ ಹುಟ್ಟೂರಿಗೆ ಮರಳಿದ ತಕ್ಷಣ ನೌಕರಿ ಕೊಡುಗೆ ಭರವಸೆ ನೀಡಿದ ರಾಜ್ಯ ಸರ್ಕಾರವನ್ನು ಬಿಜೆಪಿ ಉಪಾಧ್ಯಕ್ಷ ಮುಕ್ತರ್ ಅಹ್ಮದ್ ನಖ್ವಿ ಹಾಗೂ ವಕ್ತಾರ ಪ್ರಕಾಶ್ ಜಾವದೇಕರ್ ಸ್ವಾಗತಿಸಿ ಶ್ಲಾಘಿಸಿದ್ದರು.
ಆಸ್ಟ್ರೇಲಿಯಾ ಸರ್ಕಾರ ಅಲ್ಲಿನ ವಿರೋಧಪಕ್ಷಗಳು ಹಾಗೂ ಭಾರತ ಸರ್ಕಾರದ ಭಾರೀ ಒತ್ತಡಕ್ಕೆ ಮಣಿದು ಹನೀಫ್‌ನ್ನು ಬಿಡುಗಡೆ ಮಾಡಿದೆ, ಕಾಂಗ್ರೆಸ್ ಪಕ್ಷ ಕೂಡ ಮಿತಿಮೀರಿದ ಒಲವು ಹೊಂದಿದೆ ಎಂದು ಆರೋಪಿಸಿರುವ ಆರ್‌ಎಸ್‌ಎಸ್ ಪತ್ರಿಕೆಯಲ್ಲಿನ ಲೇಖನದಲ್ಲಿ ಬಿಜೆಪಿಯ ಕುರಿತಾಗಿ ಪ್ರತಿಕ್ರಿಯಿಸಿಲ್ಲ.
|