ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನನ್ನದು ಸಕ್ರಿಯ ರಾಜಕೀಯ-ಪ್ರತಿಭಾ
ನಾನು ರಬ್ಬರ್‌ಸ್ಟಾಂಪ್ ರಾಷ್ಟ್ರಪತಿ ಅಲ್ಲ, ಸಕ್ರಿಯ ರಾಜಕಾರಣದ ರಾಷ್ಟ್ರಪತಿ ಎಂಬುದಾಗಿ ನೂತನ ರಾಷ್ಟ್ರಪತಿ ಪ್ರತಿಭಆ ಪಾಟೀಲ್‌ ಪುನರುಚ್ಚರಿಸಿದ್ದಾರೆ.

ರಾಷ್ಟ್ರಪತಿ ಭವನವನ್ನು ರಾಜಕೀಯಮುಕ್ತವಾಗಿಸಿ 'ಜನತೆಯಮನೆ'ಯ ಮನೆಯಾಗಿಸಿ ಹೇಳಿಕೆ ನೀಡಿರುವ ನಿಕಟಪೂರ್ವ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಅದೇ ಸ್ಥಾನದಲ್ಲಿ ಕುಳಿತು ಪ್ರತಿಭಾ ಪಾಟೀಲ್ ಈ ಹೇಳಿಕೆ ನೀಡಿದ್ದಾರೆ.

ಕೇವಲ ದಾಖಲೆ ಪತ್ರಗಳಿಗೆ ಸಹಿ-ಸೀಲು ಹಾಕಿ, ಸರ್ಕಾರದ ಧೋರಣೆಗಳಿಗೆ ತಲೆದೂಗುವ ರಾಷ್ಟ್ರಪತಿ ನಾನಲ್ಲ, ನನ್ನದು ಸರಿತಪ್ಪುಗಳ ವಿವೇಚನೆ ಹೊಂದಿದ ಸಕ್ರಿಯ ರಾಜಕಾರಣದ ಆಡಳಿತ ಎಂಬುದು ಪ್ರತಿಭಾ ಪಾಟೀಲ್ ಅವರ ಹೇಳಿಕೆಯ ಅಂತರರ್ಥ.

ಭಾರತದ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರಪತಿಗೆ ಯಾವೆಲ್ಲ ಅಧಿಕಾರಗಳಿವೆಯೊ ಅದನ್ನು ಸಮರ್ಪಕವಾಗಿ ಬಳಸುತ್ತೇನೆ. ಹಿಂದುಳಿದ ಪ್ರದೇಶ,ಹಿಂದುಳಿದ ವಿಭಾಗಗಳ ಅಭಿವೃದ್ಧಿ, ಮಹಿಳೆಯರ ಸಶಕ್ತೀಕರಣ, ಆರೋಗ್ಯ-ಶಿಕ್ಷಣ ಇತ್ಯಾದಿಗಳಿಗೆ ಆದ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ.
ಮತ್ತಷ್ಟು
ಹನೀಫ್‌:ಬಿಜೆಪಿ-ಆರ್‌ಎಸ್‌ಎಸ್ ದ್ವಂದ್ವ
ಪೊಲೀಸ್‌ ಗುಂಡು:1ಸಾವು
ಸಿಂಗ್‌, ಸೋನಿಯಾ-ಕ್ರಿಮಿನಲ್ ದೂರು
ತೀರ್ಪುಗಳ ಗದ್ದಲ:ಮಸುಕಾದ ಚುನಾವಣೆ
ಮುಂಬೈಮಳೆ: ಜನಜೀವನ ಅಸ್ತವ್ಯಸ್ತ
ಸ್ಫೋಟ:84 ಮಂದಿಯಿಂದ ಜಾಮೀನು ಅರ್ಜಿ