ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬಿಹಾರ,ಅಸ್ಸಾಂ ಪ್ರವಾಹಕ್ಕೆ ತತ್ತರ
ಮಳೆಗೆ ತತ್ತರಿಸಿರುವ ಕಾಜಿರಂಗಾದಲ್ಲಿನ ಖಡ್ಗಮೃಗ
PTI PhotographerPTI
ಕಳೆದ ಒಂದು ವಾರದಿಂದ ಮುಂಗಾರು ಮಳೆ ಧಾರಾಕಾರವಾಗಿ ಸುರಿಯುತ್ತಿದ್ದ ಪರಿಣಾಮವಾಗಿ ಉತ್ತರಪ್ರದೇಶ,ಬಿಹಾರ ಹಾಗೂ ಅಸ್ಸಾಂಗಳಲ್ಲಿ ಲಕ್ಷಾಂತರ ಮಂದಿಯ ಬೆಳೆ ನಾಶವಾಗಿದ್ದು,ಜನಜೀವನ ಅಸ್ತವ್ಯಸ್ತಗೊಂಡಿದೆ.

ಈ ಮಳೆಯಿಂದಾಗಿ 60ಲಕ್ಷ ಜನರು ಪರದಾಡುವಂತಾಗಿದೆ,ಅಲ್ಲದೇ 11ದಿನಗಳಲ್ಲಿ ಪ್ರವಾಹಕ್ಕೆ ಸಿಲುಕಿ ನೂರುಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.10ಮಿಲಿಯನ್ನು ಮಂದಿ ನಿರಾಶ್ರಿತರಾಗಿದ್ದಾರೆ.ಹೆಚ್ಚಿನವರು ಆಹಾರ ಮತ್ತು ಔಷಧೋಪಚಾರ ಇಲ್ಲದೆ ನರಳುವಂತಾಗಿದೆ ಎಂದು ಜನರು ಆರೋಪಿಸಿದ್ದಾರೆ.

ಬಿಹಾರದ ಮುಜಾಫರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆ ಜನರಿಗೆ ಹೆಲಿಕ್ಯಾಪ್ಟರ್ ಮೂಲಕ ಆಹಾರ ಒದಗಿಸುವ ಕೆಲಸದಲ್ಲಿ ನಿರತರಾಗಿದ್ದು.ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿನ ಡ್ಯಾಂ ಕುಸಿದ ಪರಿಣಾಮ ನೂರಾರು ಹಳ್ಳಿಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಇದರಿಂದಾಗಿ ಅಲರ್ಜಿ,ವಾಂತಿ ಬೇಧಿ,ಜ್ವರ ಮುಂತಾದ ರೋಗಗಳು ಕಾಣಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಮಲೇರಿಯ ಹರಡುವ ಅಪಾಯದ ಕುರಿತು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಬಿಹಾರದಲ್ಲಿ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 77ಕ್ಕೇರಿದೆ.ಪರಿಸ್ಥಿತಿಯ ಕುರಿತು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಮತ್ತಷ್ಟು
ನನ್ನದು ಸಕ್ರಿಯ ರಾಜಕೀಯ-ಪ್ರತಿಭಾ
ಹನೀಫ್‌:ಬಿಜೆಪಿ-ಆರ್‌ಎಸ್‌ಎಸ್ ದ್ವಂದ್ವ
ಪೊಲೀಸ್‌ ಗುಂಡು:1ಸಾವು
ಸಿಂಗ್‌, ಸೋನಿಯಾ-ಕ್ರಿಮಿನಲ್ ದೂರು
ತೀರ್ಪುಗಳ ಗದ್ದಲ:ಮಸುಕಾದ ಚುನಾವಣೆ
ಮುಂಬೈಮಳೆ: ಜನಜೀವನ ಅಸ್ತವ್ಯಸ್ತ