ನೂತನವಾಗಿ ಅಸ್ತಿತ್ವಕ್ಕೆ ಬಂದ ಎಂಟುಪಕ್ಷಗಳ ತೃತೀಯ ರಂಗ ಈಗಾಗಲೇ ಪತನಗೊಂಡಿರುವುದಾಗಿ ಎಡಪಕ್ಷದ ಮುಖಂಡ ಸೀತಾರಾಂ ಯೆಚೂರಿ ತಿಳಿಸಿದ್ದು,ಆ ನಿಟ್ಟಿನಲ್ಲಿ ಪಕ್ಷ ಪುನಃ ತೆಲುಗು ದೇಶಂ ಪಕ್ಷದೊಂದಿಗೆ ಸೇರಿ ಬದಲಿ ತೃತೀಯರಂಗ ರಚಿಸುವ ಸೂಚನೆ ನೀಡಿದ್ದಾರೆ.
ಇತ್ತೀಚೆಗಷ್ಟೇ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಯುನೈಟೆಡ್ ನ್ಯಾಶನಲ್ ಪ್ರೊಗ್ರೇಸಿವ್ ಅಲೈಯನ್ಸ್ನ ಎಐಎಡಿಎಂಕೆಯ ವರಿಷ್ಠೆ ಜಯಲಲಿತಾ ಅವರು ಪಕ್ಷದ ಶಿಷ್ಟಾಚಾರವನ್ನು ಬದಿಗೊತ್ತಿ ಎನ್ಡಿಎ ಬೆಂಬಲಿತ ಅಭ್ಯರ್ಥಿ ಭೈರೋನ್ ಸಿಂಗ್ ಶೇಖಾವತ್ ಅವರಿಗೆ ಮತದಾನ ಮಾಡಿದ ನಂತರ ಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಿದೆ.ಇದರಿಂದಾಗಿ ಆ ತೃತೀಯರಂಗ ಪತನಗೊಂಡಂತಾಗಿದ್ದು,ಇದೀಗ ಪಕ್ಷ ತೃತೀಯರಂಗ ಹೊರತುಪಡಿಸಿ ಬದಲಿ ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವುದಾಗಿ ಯೆಚೂರಿ ಸ್ಫಷ್ಟಪಡಿಸಿದರು.
ತೃತೀಯರಂಗದ ಬದಲಾಗಿ,ಎಡಪಕ್ಷಗಳು ಕಾಂಗ್ರೆಸ್ ಮತ್ತು ಭಾರತೀಯ ಜನತಾಪಕ್ಷವನ್ನು ಸಮಾನವಾಗಿ ದೂರದಲ್ಲಿಟ್ಟು ಬದಲಿ ಪಕ್ಷವನ್ನು ರಚಿಸುವುದಾಗಿ ಅವರು ಸುದ್ದಿಸಂಸ್ಧೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
|