ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಬ್‌ಜೈಲಿನಿಂದ ನಾಲ್ವರು ಕೈದಿಗಳು ಪರಾರಿ
ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಉಪ ಬಂಧಿಖಾನೆಯಿಂದ ನಾಲ್ಕು ಮಂದಿ ವಿಚಾರಣಾಧೀನ ಕೈದಿಗಳು ಪಾರಾಗಿದ್ದು, ಪತ್ತೆ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಬಂಗಾಳದ 24 ಪರಗಣ ಜಿಲ್ಲೆಯ ಡೈಮಂಡ್ ಡೈಮಂಡ್ ಹಾರ್ಬರ್ ಸಬ್‌ಜೈಲಿನಲ್ಲಿ ಪ್ರಕರಣ ಸಂಭವಿಸಿದೆ. ಜೈಲುಜಿಗಿದ ಆರೋಪಿಗಳಲ್ಲಿ ಇಬ್ಬರು ಡಕಾಯಿತಿ ಕೃತ್ಯ ಹಾಗೂ ಇನ್ನಿಬ್ಬರು ವಿದ್ಯಾರ್ಥಿಗಳ ಕೊಲೆ ಆರೋಪ ಹೊಂದಿದ್ದರು.

ಆರೋಪಿಗಳಲ್ಲಿ ಇಬ್ಬರು ಕಾಕ್‌ದ್ವೀಪ ನಿವಾಸಿಗಳು ಇವರು ಕುಖ್ಯಾತ ಡಕಾಯಿತಿ ಬಾಂಗ್ಲಾದೇಶದಿಂದ ಕಳ್ಳಸಾಗಣೆ ವ್ಯವಹಾರ ನಡೆಸುತ್ತಿದ್ದವರು. ಇತರಿಬ್ಬರು ಚಲಿಸುವ ರೈಲುಗಾಡಿಯಲ್ಲಿ ವಿದ್ಯಾರ್ಥಿಗಳ ಹತ್ಯೆಗಾಗಿ ಜೈಲು ಸೇರಿದ್ದರು.

ಪರಾರಿಯಾದ ಜೈಲುಹಕ್ಕಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ಆರಂಭವಾಗಿದೆ.
ಮತ್ತಷ್ಟು
ಹನೀಫ್ ಗೌರವ ಪ್ರಜೆ:ಆಸ್ಟ್ರೇಲಿಯ ನಕಾರ
ಅಣು ಒಪ್ಪಂದ: ಮತದಾನಕ್ಕೆ ಬಿಜೆಪಿ ಪಟ್ಟು
ತೃತೀಯ ರಂಗ ಪತನ: ಯೆಚೂರಿ
ಬಿಹಾರ,ಅಸ್ಸಾಂ ಪ್ರವಾಹಕ್ಕೆ ತತ್ತರ
ನನ್ನದು ಸಕ್ರಿಯ ರಾಜಕೀಯ-ಪ್ರತಿಭಾ
ಹನೀಫ್‌:ಬಿಜೆಪಿ-ಆರ್‌ಎಸ್‌ಎಸ್ ದ್ವಂದ್ವ