ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕಾಶ್ಮೀರಕ್ಕಾಗಿ ದೆಹಲಿಗೆ ಬಾಂಬ್:ಅಲ್‌ಖೈದಾ
ಭಾರತ ಹಾಗೂ ಅಮೇರಿಕ ನಡುವಿನ ಜಂಟಿಒಪ್ಪಂದವನ್ನು ಖಂಡಿಸಿರುವ ಮುಸ್ಲಿಂ ಭಯೋತ್ಪಾದಕ ಸಂಘಟನೆ ಅಲ್‌ಖೈದಾ, ಇದಕ್ಕೆ ಪ್ರತಿಯಾಗಿ ದೆಹಲಿಯನ್ನು ಉಡಾಯಿಸುವುದು ಉಗ್ರರ ನ್ಯಾಯಬದ್ಧ ಹಕ್ಕು ಎಂದು ಎಚ್ಚರಿಸಿದೆ.

ಅಮೇರಿಕದ ಕುಮ್ಮಕ್ಕಿನೊಂದಿಗೆ ಭಾರತ ಸರ್ಕಾರ ಕಾಶ್ಮೀರದಲ್ಲಿ 1 ಲಕ್ಷ ಮುಸ್ಲೀಮರನ್ನು ಹತ್ಯೆಗೈದಿದೆ. ಇದಕ್ಕೆ ಪ್ರತಿಕಾರವಾಗಿ ದೆಹಲಿಯನ್ನು ಸ್ಫೋಟಿಸಿ ರಕ್ತದೋಕುಳಿ ಹರಿಸುವುದಾಗಿ ಅಲ್‌ಖೈದಾ ಭಾನುವಾರ ಪ್ರಸಾರಮಾಡಿದ ವೀಡಿಯೊ ದೃಶ್ಯಾವಳಿಯಲ್ಲಿ ಎಚ್ಚರಿಸಿದೆ.

ಅಲ್‌ಖೈದಾ ನೀಡಿರುವ ಹೇಳಿಕೆಯಂತೆ ಉಗ್ರದ ಈಗಿನ ಪ್ರಮುಖ ಗುರಿಗಳೆಂದರೆ ದೆಹಲಿ, ಟೆಲ್‌ಅವೀವ್ ಹಾಗೂ ಮಾಸ್ಕೊ ಆದ್ಯತೆಯಲ್ಲಿರುತ್ತವೆ ಎಂದು ತಿಳಿಸಲಾಗಿದೆ.

ವೀಡಿಯೋ ದೃಶ್ಯಗಳಲ್ಲಿ ಅಲ್‌ಖೈದಾ ಮುಖಂಡ ಒಸಾಮಾ ಬಿನ್ ಲಾಡೇನ್ ಹಾಗೂ ಆತನ ಬಲಗೈಬಂಟ ಅಯ್ಮಾನ್ ಅಲ್ ಝವಾರಿ ಕಾಣಿಸಿಕೊಂಡು ಹೇಳಿಕೆ ನೀಡಿದ್ದಾರೆ.

ಕರಾಚಿಯಲ್ಲಿ ಅಮೇರಿಕಾ ರಾಯಭಾರಿ ಕಚೇರಿಯಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಸಂಭವಿಸಿದ ಮಾನವಬಾಂಬ್ ಧಾಳಿಯ ದೃಶ್ಯಗಳನ್ನು ಆದ್ಯತೆಯಲ್ಲಿ ನೀಡಲಾಗಿದೆ. 2001 ಸೆಪ್ಟೆಂಬರ್‌11ರಲ್ಲಿ ಅಮೇರಿಕದ ಅವಳಿ ವಾಣಿಜ್ಯ ಸಂಕೀರ್ಣದ ಮೇಲೆ ವಿಮಾನ ಧಾಳಿಯ ಚಿತ್ರಗಳನ್ನು ಸಾಧನೆಯ ಹೆಜ್ಜೆಗುರುತುಗಳಾಗಿ ತೋರಿಸಲಾಗಿದೆ.

ಕಳೆದ ವಾರವಷ್ಟೇ ಗುಪ್ತಚರ ಮಾಹಿತಿ ಸಂಸ್ಥೆ ಸ್ಟ್ರಾಟ್‌ಫರ್ ಭಾರತಕ್ಕೆ ಮುನ್ನೆಚ್ಚರಿಕೆ ನೀಡಿ ಭಯೋತ್ಪಾದಕರು ದಾಳಿಯಲ್ಲಿ ಬಳಸುವ ಅತ್ಯಾಧುನಿಕ ತಂತ್ರಗಾರಿಕೆಯ ಕುರಿತು ದೇಶ ಸ್ವಯಂರಕ್ಷೆ ಮಾಡಿಕೊಳ್ಳಬೇಕು, ಭಾರತೀಯ ಗುಪ್ತಚರ ವಿಭಾಗ ಐಬಿಯ ಸಾಮರ್ಥ್ಯಕ್ಕಿಂತ ಇದು ಮಿಗಿಲಾದುದು ಎಂದು ತಿಳಿಸಿರುವುದನ್ನಿಲ್ಲಿ ಸ್ಮರಿಸಬಹುದಾಗಿದೆ.ಕಾಶ್ಮೀರಕ್ಕಾಗಿ ದೆಹಲಿಗೆ ಬಾಂಬ್:ಅಲ್‌ಖೈದಾ
ನವದೆಹಲಿ
ಭಾರತ ಹಾಗೂ ಅಮೇರಿಕ ನಡುವಿನ ಜಂಟಿಒಪ್ಪಂದವನ್ನು ಖಂಡಿಸಿರುವ ಮುಸ್ಲಿಂ ಭಯೋತ್ಪಾದಕ ಸಂಘಟನೆ ಅಲ್‌ಖೈದಾ, ಇದಕ್ಕೆ ಪ್ರತಿಯಾಗಿ ದೆಹಲಿಯ್ನನು ಉಡಾಯಿಸುವುದು ಉಗ್ರರ ನ್ಯಾಯಬದ್ಧ ಹಕ್ಕು ಎಂದು ಎಚ್ಚರಿಸಿದೆ.

ಅಮೇರಿಕದ ಕುಮ್ಮಕ್ಕಿನೊಂದಿಗೆ ಭಾರತ ಸರ್ಕಾರ ಕಾಶ್ಮೀರದಲ್ಲಿ 1 ಲಕ್ಷ ಮುಸ್ಲೀಮರನ್ನು ಹತ್ಯೆಗೈದಿದೆ. ಇದಕ್ಕೆ ಪ್ರತಿಕಾರವಾಗಿ ದೆಹಲಿಯನ್ನು ಸ್ಫೋಟಿಸಿ ರಕ್ತದೋಕುಳಿ ಹರಿಸುವುದಾಗಿ ಅಲ್‌ಖೈದಾ ಭಾನುವಾರ ಪ್ರಸಾರಮಾಡಿದ ವೀಡಿಯೊ ದೃಶ್ಯಾವಳಿಯಲ್ಲಿ ಎಚ್ಚರಿಸಿದೆ.

ಅಲ್‌ಖೈದಾ ನೀಡಿರುವ ಹೇಳಿಕೆಯಂತೆ ಉಗ್ರದ ಈಗಿನ ಪ್ರಮುಖ ಗುರಿಗಳೆಂದರೆ ದೆಹಲಿ, ಟೆಲ್‌ಅವೀವ್ ಹಾಗೂ ಮಾಸ್ಕೊ ಆದ್ಯತೆಯಲ್ಲಿರುತ್ತವೆ ಎಂದು ತಿಳಿಸಲಾಗಿದೆ.

ವೀಡಿಯೋ ದೃಶ್ಯಗಳಲ್ಲಿ ಅಲ್‌ಖೈದಾ ಮುಖಂಡ ಒಸಾಮಾ ಬಿನ್ ಲಾಡೇನ್ ಹಾಗೂ ಆತನ ಬಲಗೈಬಂಟ ಅಯ್ಮಾನ್ ಅಲ್ ಝವಾರಿ ಕಾಣಿಸಿಕೊಂಡು ಹೇಳಿಕೆ ನೀಡಿದ್ದಾರೆ.

ಕರಾಚಿಯಲ್ಲಿ ಅಮೇರಿಕಾ ರಾಯಭಾರಿ ಕಚೇರಿಯಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಸಂಭವಿಸಿದ ಮಾನವಬಾಂಬ್ ಧಾಳಿಯ ದೃಶ್ಯಗಳನ್ನು ಆದ್ಯತೆಯಲ್ಲಿ ನೀಡಲಾಗಿದೆ. 2001 ಸೆಪ್ಟೆಂಬರ್‌11ರಲ್ಲಿ ಅಮೇರಿಕದ ಅವಳಿ ವಾಣಿಜ್ಯ ಸಂಕೀರ್ಣದ ಮೇಲೆ ವಿಮಾನ ಧಾಳಿಯ ಚಿತ್ರಗಳನ್ನು ಸಾಧನೆಯ ಹೆಜ್ಜೆಗುರುತುಗಳಾಗಿ ತೋರಿಸಲಾಗಿದೆ.

ಕಳೆದ ವಾರವಷ್ಟೇ ಗುಪ್ತಚರ ಮಾಹಿತಿ ಸಂಸ್ಥೆ ಸ್ಟ್ರಾಟ್‌ಫರ್ ಭಾರತಕ್ಕೆ ಮುನ್ನೆಚ್ಚರಿಕೆ ನೀಡಿ ಭಯೋತ್ಪಾದಕರು ದಾಳಿಯಲ್ಲಿ ಬಳಸುವ ಅತ್ಯಾಧುನಿಕ ತಂತ್ರಗಾರಿಕೆಯ ಕುರಿತು ದೇಶ ಸ್ವಯಂರಕ್ಷೆ ಮಾಡಿಕೊಳ್ಳಬೇಕು, ಭಾರತೀಯ ಗುಪ್ತಚರ ವಿಭಾಗ ಐಬಿಯ ಸಾಮರ್ಥ್ಯಕ್ಕಿಂತ ಇದು ಮಿಗಿಲಾದುದು ಎಂದು ತಿಳಿಸಿರುವುದನ್ನಿಲ್ಲಿ ಸ್ಮರಿಸಬಹುದಾಗಿದೆ.
ಮತ್ತಷ್ಟು
ಭೂಹಗರಣ:ಅಶೋಕ್ ಮಲ್ಹೋತ್ರ ಸೆರೆ
ಸಬ್‌ಜೈಲಿನಿಂದ ನಾಲ್ವರು ಕೈದಿಗಳು ಪರಾರಿ
ಹನೀಫ್ ಗೌರವ ಪ್ರಜೆ:ಆಸ್ಟ್ರೇಲಿಯ ನಕಾರ
ಅಣು ಒಪ್ಪಂದ: ಮತದಾನಕ್ಕೆ ಬಿಜೆಪಿ ಪಟ್ಟು
ತೃತೀಯ ರಂಗ ಪತನ: ಯೆಚೂರಿ
ಬಿಹಾರ,ಅಸ್ಸಾಂ ಪ್ರವಾಹಕ್ಕೆ ತತ್ತರ