ದೇಶದಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರವಾಗಿದ್ದು, ಸಾವಿನ ಸಂಖ್ಯೆಯೇ ಭಯಾನಕವಾಗಿದೆ, ಮೃತ ಪಟ್ಟವರ ಸಂಖ್ಯೆ1200 ಎಂದು ಗೃಹಇಲಾಖೆಯ ಸಮೀಕ್ಷೆ ತಿಳಿಸಿದೆ.
ಅಧಿಕೃತ ಮಾಹಿತಿಗಳಂತೆ ದೇಶದ 10 ರಾಜ್ಯಗಳಲ್ಲಿ ಮುಂಗಾರು ಹಾನಿ ಗಂಭೀರ ಎಂದು ಪರಿಗಣಿಸಲಾಗಿದೆ. ಈ ರಾಜ್ಯಗಳಲ್ಲಿ ಸುಮಾರು 5 ದಶಲಕ್ಷ ಎಕ್ರೆ ಪ್ರದೇಶಗಳಲ್ಲಿದ್ದ ಫಲಭರಿತ ಬೆಳೆಹಾನಿಯಾಗಿದೆ.
ಮಳೆಯಿಂದ ಗಂಭೀರವಾಗಿ ಹಾನಿಗೊಳಗಾದ 10 ರಾಜ್ಯಗಳಪಟ್ಟಿಯಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಬಿಹಾರ, ಆಂಧ್ರಪ್ರದೇಶ,ಉತ್ತರ ಪ್ರದೇಶ,ಅಸ್ಸೋಮ್, ಗುಜರಾತ್, ಪಶ್ಚಿಮ ಬಂಗಾಳ ಮುಂತಾದವುಗಳು ಸೇರಿವೆ.
|