ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಂಜಯ್‌ದತ್‌ ಸು.ಕೋರ್ಟ್‌ಗೆ ಮೇಲ್ಮನವಿ
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಆರು ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆಗೊಳಗಾಗಿರುವ ಬಾಲಿವುಡ್ ನಟ ಸಂಜಯ್‌ದತ್‌ ಟಾಡಾ ನ್ಯಾಯಾಲಯದ ಪ್ರಸ್ತುತ ತೀರ್ಪು ಪ್ರಶ್ನಿಸಿ ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿದ್ದಾರೆ.

ತೀರ್ಪನ್ನು ಪ್ರಶ್ನಿಸಿರುವುದರೊಂದಿಗೆ ಜಾಮೀನು ಬಿಡುಗಡೆ ಕೋರುವ ಅರ್ಜಿಯನ್ನೂ ಸಲ್ಲಿಸಲಾಗಿದೆ. ಕಾನೂನಿನಡಿ ಲಭ್ಯ ಅವಕಾಶವನ್ನು ಸಮರ್ಪಕವಾಗಿ ಬಳಸಲಾಗಿದೆ ಎಂದು ಆಪ್ತವಲಯಗಳು ತಿಳಿಸಿವೆ.

ಭಯೋತ್ಪಾದಕರೊಂದಿಗೆ ಸಂಪರ್ಕ ಹಾಗೂ ಶಸ್ತ್ರಾಸ್ತ್ರಗಳ ಅಕ್ರಮ ದಾಸ್ತಾನು ನಿಷೇಧ ಕಾಯ್ದೆಯಡಿ ವಿಶೇಷ ಟಾಡಾ ನ್ಯಾಯಾಲಯವು ಸಂಜಯ್‌ ದತ್‌ಗೆ ಕಠಿಣ ಕಾರಾವಾಸ ಶಿಕ್ಷೆ ವಿಧಿಸಿತ್ತು.

ಜುಲೈ 31ರಂದು ತೀರ್ಪು ಘೋಷಿಸಿದ್ದ ವಿಶೇಷ ಟಾಡಾ ನ್ಯಾಯಾಲಯದ ನ್ಯಾಯಾಧೀಶ ಪಿ ಡಿ ಕೋಡೆ ಅವರು, ಸಂಜಯ್‌ ದತ್‌ ಅವರ ಜನಪ್ರಿಯತೆ, ಅವರ ಮೇಲಿನ ಅನುಕಂಪ ಇತ್ಯಾದಿಗಳನ್ನು ಕಡೆಗಣಿಸಿ ಕಾನೂನಿಗೆ ಪ್ರಾಧಾನ್ಯ ನೀಡಿರುವುದಾಗಿ ಹೇಳಿ ಶಿಕ್ಷೆವಿಧಿಸಿದ್ದರು.
ಮತ್ತಷ್ಟು
ಪ್ರವಾಹಗ್ರಸ್ತ ಪ್ರದೇಶಗಳಿಗೆ ಸೋನಿಯಾ ಭೇಟಿ
ದೇಶದಲ್ಲಿ ಮಳೆಗೆ 1200 ಮಂದಿ ಬಲಿ
ಕಾಶ್ಮೀರಕ್ಕಾಗಿ ದೆಹಲಿಗೆ ಬಾಂಬ್:ಅಲ್‌ಖೈದಾ
ಭೂಹಗರಣ:ಅಶೋಕ್ ಮಲ್ಹೋತ್ರ ಸೆರೆ
ಸಬ್‌ಜೈಲಿನಿಂದ ನಾಲ್ವರು ಕೈದಿಗಳು ಪರಾರಿ
ಹನೀಫ್ ಗೌರವ ಪ್ರಜೆ:ಆಸ್ಟ್ರೇಲಿಯ ನಕಾರ